Connect with us

    LATEST NEWS

    ಪುತ್ತೂರು: ರೈಲ್ವೇ ನಿಲ್ದಾಣದಲ್ಲಿ ಅನ್ಯಕೋಮಿನ ಜೋಡಿ ಪತ್ತೆ: ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು.

    ಪುತ್ತೂರು, ಜೂನ್ 11: ಅನ್ಯಕೋಮಿನ ಜೋಡಿ ಪತ್ತೆಯಾದ ಘಟನೆ ಜೂ.10 ರಂದು ರಾತ್ರಿ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ಬನ್ನೂರು ಮೂಲದ ಅನ್ಯಕೋಮಿನ ಯುವಕನೋರ್ವ ಬೆಂಗಳೂರು ಮೂಲದ ಹಿಂದೂ ಯುವತಿಯೊಂದಿಗೆ ರೈಲ್ವೇ ನಿಲ್ದಾಣದಲ್ಲಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನ್ಯಕೋಮಿನ ಜೋಡಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಹಿಂದೂ ಯುವತಿ ಅನ್ಯಕೋಮಿನ ಯುವಕನ ಜೊತೆ ಆತನ ಸಂಬಂಧಿಕರ ಮದುವೆಗೆ ಜೊತೆಯಾಗಿ ಬಂದು ಆತನ ಮನೆಯಲ್ಲಿಯೇ ಇದ್ದು ಇಂದು ಬೆಂಗಳೂರಿಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply