Connect with us

    DAKSHINA KANNADA

    ಪುತ್ತೂರು : ಸರ್ಕಾರಿ ಜಾಗದಲ್ಲಿ ಮನೆ, ಸಾರ್ವಜನಿಕ ರಸ್ತೆಯಲ್ಲಿ ಮನೆ ಶೌಚದ ಗುಂಡಿ ನಿರ್ಮಾಣ..!!

    ಪುತ್ತೂರಿನಲ್ಲಿ ವ್ಯಕ್ತಿಯೋರ್ವರು ಸರ್ಕಾರಿ ಜಾಗದಲ್ಲಿ ಮನೆ ಮತ್ತು ಸಾರ್ವಜನಿಕ ರಸ್ತೆಯಲ್ಲಿ ಮನೆ ಶೌಚದ ಗುಂಡಿ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

    ಪುತ್ತೂರು : ಪುತ್ತೂರಿನಲ್ಲಿ ವ್ಯಕ್ತಿಯೋರ್ವರು ಸರ್ಕಾರಿ ಜಾಗದಲ್ಲಿ ಮನೆ ಮತ್ತು ಸಾರ್ವಜನಿಕ ರಸ್ತೆಯಲ್ಲಿ ಮನೆ ಶೌಚದ ಗುಂಡಿ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    2015 ರ ಬಳಿಕದ ಸರಕಾರಿ ಜಾಗದಲ್ಲಿ ಕಟ್ಟಿದ ಅಕ್ರಮ ಮನೆ ಮತ್ತು ಕಟ್ಟಡಗಳನ್ನು ತೆರವುಗೊಳಿಸಬೇಕೆಂಬ ಆದೇಶವಿದ್ದರೂ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಇಂಥದ ಪ್ರಕ್ರಿಯೆಗಳು ನಿರಂತರವಾಗಿ ಸಾಗುತ್ತಿದೆ.

    ನಗರ ಸಭಾ ವ್ಯಾಪ್ತಿಯ ಪಡ್ಡಯೂರು ಎನ್ನುವ ಪ್ರದೇಶದಲ್ಲಿ ಸರ್ಕಾರಕ್ಕೆ ಸೇರಿದ 12 ಎಕರೆ ಭೂಮಿ ಇದ್ದು, ಈ ಭೂಮಿಯನ್ನು ಅಕ್ರಮವಾಗಿ ಕಬಳಿಸಿ ಹಲವು ಮನೆಗಳು ಈ ಭಾಗದಲ್ಲಿ ನಿರ್ಮಾಣವಾಗಿವೆ.

    ಇಂತಹುದೇ ಒಂದು ಅಕ್ರಮ ಮನೆಯೊಂದು ನಿರ್ಮಾಣ ಹಂತದಲ್ಲಿದ್ದು, ಮನೆಯನ್ನು ತೆರವು ಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಮನೆ ಇಲ್ಲದ ಬಡಪಾಯಿಗಳು ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತುಕೊಳ್ಳುವುದು ಸಾಮಾನ್ಯವಾಗಿದ್ದರೂ, ಸದ್ಯ ನಿರ್ಮಾಣವಾಗುತ್ತಿರುವ ಮನೆ ಭಾರೀ ದೊಡ್ಡ ಮಟ್ಟದ್ದಾಗಿದೆ.

    ಅಲ್ಲದೆ ಅಕ್ರಮವಾಗಿ ಮನೆ ನಿರ್ಮಿಸುವ ಜೊತೆಗೆ ಸಾರ್ವಜನಿಕರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಅತಿಕ್ರಮಣ ಮಾಡಿ ಮನೆ ನಿರ್ಮಿಸಲಾಗುತ್ತಿದೆ ಎನ್ನುವ ಆರೋಪವಿದೆ.

    ಸುಮಾರು 1300 ಸ್ಕ್ವೇರ್ ಸುತ್ತಳತೆ ಇರುವ ಈ ಮನೆಯ ನಿರ್ಮಾಣ ಸಂದರ್ಭದಲ್ಲಿ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಯಾವುದೇ ನಿಯಮವನ್ನೂ ಪಾಲಿಸಲಾಗಿಲ್ಲ.

    ಮನೆಯ ಶೌಚ ಗುಂಡಿಯನ್ನು ರಸ್ತೆಯಲ್ಲೇ ನಿರ್ಮಿಸಲಾಗುತ್ತಿದೆ.

    ಈ ಬಗ್ಗೆ ಸಂಬಂಧಪಟ್ಟ ನಗರಸಭೆಗೆ ಸ್ಥಳೀಯರು ದೂರು ನೀಡಿದ್ದು, ಮನೆಯನ್ನು ತೆರವುಗೊಳಿಸುವಂತೆ ನಗರಸಭೆಯಿಂದ ನೋಟೀಸನ್ನೂ ನೀಡಲಾಗಿದೆ ಆದರೆ ತನ್ನ ಪ್ರಭಾವನ್ನು ಬಳಸಿ ಮನೆಯ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸುವುದಕ್ಕೆ ಸಾರ್ವಜನಿಕರ ಆಕ್ಷೇಪವೂ ಇಲ್ಲದಿದ್ದರೂ, ಮನೆಯನ್ನು ರಸ್ತೆಯಲ್ಲೇ ನಿರ್ಮಿಸುತ್ತಿರುವ ಬಗ್ಗೆ ಆಕ್ಷೇಪವಿದೆ.

    ಅಲ್ಲದೆ ಪ್ರಸ್ತುತ ಮನೆ ನಿರ್ಮಿಸುತ್ತಿರುವ ವ್ಯಕ್ತಿ ತನ್ನ ಮೂರು ಮನೆ ಮತ್ತು ಒಂದು ಹೋಟೇಲ್ ಅನ್ನು ಮಾರಾಟ ಮಾಡಿ ಇದೀಗ ಸರಕಾರಿ ಭೂಮಿಯಲ್ಲಿ ಮನೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *