DAKSHINA KANNADA
ಪುತ್ತೂರು – ದರ್ಬೆ ಸಚಿನ್ ಟ್ರೇಡರ್ಸ್ ಬಳಿ ಪಲ್ಟಿಯಾದ ಕಾರು – ಪ್ರಯಾಣಿಕರು ಪಾರು
ಪುತ್ತೂರು ಫೆಬ್ರವರಿ 11 : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್ ಎದುರು ನಡೆದಿದೆ.
ಪುತ್ತೂರು ದರ್ಬೆ ಸಚಿನ್ ಟ್ರೇಡರ್ಸ್ ಬಳಿ ಸುರೇಶ್ಚಂದ್ರ ರೈ ಎಂಬವರಿಗೆ ಸೇರಿದ ಟೊಯೋಟಾ ಕಾರು ಪುತ್ತೂರು ಪೇಟೆ ಕಡೆಯಿಂದ ದರ್ಬೆ ಕಡೆಗೆ ತೆರಳುತ್ತಿದ್ದ ವೇಳೆ ದರ್ಬೆ ತಲುಪುತ್ತಿದ್ದಂತೆ ಆಕಸ್ಮಿಕವಾಗಿ ಸ್ಟೇರಿಂಗ್ ಲಾಕ್ ಆಗಿದೆ ಎನ್ನಲಾಗಿದೆ. ಪರಿಣಾಮ ಕಾರು ದರ್ಬೆ ಸಚಿನ್ ಟ್ರೇಡಿಂಗ್ ಸೆಂಟರ್ ಬಳಿ ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
You must be logged in to post a comment Login