DAKSHINA KANNADA
ಪುತ್ತೂರಿನಲ್ಲಿ ಪುತ್ತಿಲ ಪರಿವಾರಕ್ಕೆ ಬೈ, ‘ಬಿಜೆಪಿಗೆ ಜೈ’ ಎಂದ ಡಾ.ಸುರೇಶ್ ಪುತ್ತೂರಾಯ..!
ಪುತ್ತೂರು : ಪುತ್ತೂರು ನಗರಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಎದುರಾಳಿಯಾಗಿ ಗುರುತಿಸಿಕೊಂಡಿರುವ ಪುತ್ತಿಲ ಪರಿವಾರದ ಮುಖಂಡರಾದ ಡಾ.ಸುರೇಶ್ ಪುತ್ತೂರಾಯ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ವೇಳೆ ಭಾಗಿಯಾಗಿ ಹುಬ್ಬೇರಿಸಿದ್ದಾರೆ.
ಈ ಬೆಳವಣಿಗೆ ಪುತ್ತೂರಿನ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೂ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸೇರಿದಂತೆ ಈ ಹಿಂದೆ ನಡೆದ ಎರಡು ಗ್ರಾಮಪಂಚಾಯತ್ ಗಳ ಉಪಚುನಾವಣೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುವ ಮೂಲಕ ಬಿಜೆಪಿಗೆ ಠಕ್ಕರ್ ನೀಡಿದ್ದ ಪುತ್ತಿಲ ಪರಿವಾರ ಪುತ್ತೂರು ನಗರಸಭೆಗೆ ತೆರವಾದ ಎರಡು ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮೂಲಕ ಮತ್ತೆ ಬಿಜೆಪಿಗೆ ಸವಾಲೆಸೆದಿದೆ. ಈಗಾಗಲೇ ಪರಿವಾರದ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನೂ ಸಲ್ಲಿಸಿದ್ದು, ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ನಾಮ ಪತ್ರವನ್ನು ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಅನುಪಸ್ಥಿತ ಇದ್ದ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರಿನ ಖ್ಯಾತ ವೈದ್ಯ ಸುರೇಶ್ ಪುತ್ತೂರಾಯ ಇಂದು ನಡೆದ ಬಿಜೆಪಿ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಉಪಸ್ಥಿತರಿದ್ದು ಅಚ್ಛರಿಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಹೂಮಾಲೆ ಹಾಕುವ ಹಾಕಿ ಆಶೀರ್ವದಿಸಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.