Connect with us

  KARNATAKA

  ಒಂದಲ್ಲಾ ಒಂದು ದಿನ ಮಂಗಳೂರಿಗೆ ನೀವು ಬಂದೇ ಬರುತ್ತೀರಿ..ಆರ್ ಅಶೋಕ್ ಗೆ ಪುನೀತ್ ಅತ್ತಾವರ ಎಚ್ಚರಿಕೆ

  ಮಂಗಳೂರು,ಫೆಬ್ರವರಿ 21: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಪಬ್ ದಾಳಿ ಮಾಡಿದ ಬಜರಂಗದಳ ಕಾರ್ಯಕರ್ತರ ಮೇಲೆ ನಾನು ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಆರ್. ಅಶೋಕ್ ವಿರುದ್ದ ಇದೀಗ ಬಜರಂಗದಳ ಮುಖಂಡರು ತಿರುಗಿ ಬಿದ್ದಿದ್ದಾರೆ.


  ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಅವತ್ತು ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ಮಾಡಿದ್ದ ಭಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು. ಈಗಿನ ಗೃಹ ಸಚಿವ ಪರಮೇಶ್ವರ್​ಗೆ ಬುದ್ದಿ ಹೇಳೋ ಭರದಲ್ಲಿ ಆರ್.ಅಶೋಕ್ ಮಾತನಾಡಿದ್ದರು. ಸದ್ಯ ಅಶೋಕ್​ ಅವರ ಈ ಹೇಳಿಕೆಗೆ ಆಕ್ರೋಶ ಭುಗಿಲೆದ್ದಿದೆ.

  ಅಶೋಕ್ ಹೇಳಿಕೆ ವಿರುದ್ದ ಮಂಗಳೂರು ಭಜರಂಗದಳ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು ಮಂಗಳೂರಿನ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಆರ್‌‌.ಅಶೋಕ್​ಗೆ ಭಜರಂಗದಳ ಮಂಗಳೂರು ವಿಭಾಗ ಸಹಸಂಯೋಜಕ ಪುನೀತ್ ಅತ್ತಾವರ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply