LATEST NEWS
ಪಂಪ್ ವೆಲ್ ಫ್ಲೈಓವರ್ ನವಯುಗ್ ಸಂಸ್ಥೆ ವಿರುದ್ದ ಕ್ರಮಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ

ಪಂಪ್ ವೆಲ್ ಫ್ಲೈಓವರ್ ನವಯುಗ್ ಸಂಸ್ಥೆ ವಿರುದ್ದ ಕ್ರಮಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ
ನವದೆಹಲಿ ಅಗಸ್ಟ್ 11: ಪಂಪವೆಲ್ ಫ್ಲೈಓವರ್ ನ ನಿಧಾನಗತಿಯ ಕಾಮಗಾರಿಯಿಂದಾಗಿ ಸಂಸದ ನಳಿನ್ ಕುಮಾಕ್ ಕಟೀಲ್ ವಿರುದ್ದ ಕಾಂಗ್ರೇಸ್ ಮಾಡುತ್ತಿರುವ ಆರೋಪಗಳ ಮಾಹಿತಿಯನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ರಾಜ್ಯದ ಸಂಸದರು ಭೇಟಿ ಮಾಡಿ ಸವಿಸ್ತಾರವಾಗಿ ತಿಳಿಸಿದರು.
ಮಂಗಳೂರಿನಲ್ಲಿ ಪಂಪ್ ವೆಲ್ ಪ್ಲೈ ಓವರ ನಿಧಾನಗತಿಯ ಕಾಮಗಾರಿಯಿಂದಾಗಿ ಜಿಲ್ಲೆಯಲ್ಲಿ ಸಂಸದ ನಳಿನ್ ಕಮಾರ್ ಕಟೀಲ್ ಹಾಗೂ ಬಿಜೆಪಿ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೇಸ್ ಈಗಾಗಲೇ ಪ್ರತಿಭಟನೆ ಯನ್ನು ಕೂಡ ನಡೆಸಿದೆ.

ಈ ಹಿನ್ನಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದ ಗೋಪಾಲ್ ಶೆಟ್ಟಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ನವಯುಗ್ ಕನ್ಸ್ಟ್ರಕ್ಷನ್ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ತತ್ ಕ್ಷಣ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಒಂದು ವಾರದ ಒಳಗಾಗಿ ಹೆದ್ದಾರಿ ಅಧಿಕಾರಿಗಳು, ನವಯುಗ್ ಸಂಸ್ಥೆ, ಸಂಸದರು ಮತ್ತು ಸಚಿವರ ಸಂಯುಕ್ತ ಸಭೆ ಯನ್ನು ಸಚಿವರ ದೆಹಲಿ ಕಚೇರಿಯಲ್ಲಿ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.