MANGALORE
ತಪ್ಪದೇ ಪೋಲಿಯೋ ಹನಿ ಹಾಕಿಸಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ತಪ್ಪದೇ ಪೋಲಿಯೋ ಹನಿ ಹಾಕಿಸಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ ಜನವರಿ 27: ಪೋಲಿಯೋ ನಿರ್ಮೂಲನೆಗಾಗಿ ಜನವರಿ 28 ಮತ್ತು ಮಾರ್ಚ್ 11ರಂದು ಮಕ್ಕಳಿಗೆ ಮನೆಯ ಪಕ್ಕದಲ್ಲಿರುವ ಪೋಲಿಯೋ ಬೂತ್‍ಗೆ ತೆರಳಿ 2 ಹನಿ ಹಾಕಿಸಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 82872 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಗುರಿ ನಿಗದಿ ಮಾಡಿದ್ದು, ಗ್ರಾಮಾಂತರ ಪ್ರದೇಶದಲ್ಲಿ 66681 ಮಕ್ಕಳು ಹಾಗೂ ನಗರದಲ್ಲಿ 16191 ಮಕ್ಕಳು ಎಂದು ಗುರುತಿಸಲಾಗಿದೆ.
ಮನೆ ಮನೆಗೆ ಬಂದು ಹಾಕಲಿ ಎಂಬ ಮನೋಭಾವದಿಂದ ಹೊರಬಂದು ಒಂದೇ ದಿನ ಎಲ್ಲ ಮಕ್ಕಳು ಪೋಲಿಯೋ ಹನಿ ಹಾಕಿಸಿಕೊಳ್ಳುವುದರಿಂದ ಪೋಲಿಯೋ ರಹಿತ ಸಮಾಜದ ಕನಸು ನನಸಾಗಲಿದೆ ಎಂದರು.
ಪೋಲಿಯೋ ಹನಿ ಲಸಿಕೆ ಹಾಕಲು ಒಟ್ಟು 670 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, 30 ಟ್ರಾನ್ಸಿಟ್ ಬೂತ್‍ಗಳು, 11 ಮೊಬೈಲ್ ಟೀಮ್ ಗಳನ್ನು ರಚಿಸಲಾಗಿದೆ.
You must be logged in to post a comment Login