LATEST NEWS
ಶಾಸಕ ರಘುಪತಿ ಭಟ್ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ವೆಚ್ಚದಲ್ಲಿ ಖರೀದಿಸಿದ ಪಲ್ಸ್ ಆಕ್ಸೀ ಮೀಟರ್ ಆರೋಗ್ಯ ಇಲಾಖೆಗೆ ಹಸ್ತಾಂತರ
ಉಡುಪಿ, ಮೇ 17: ಕೊರೊನಾ ಸೋಂಕು ದೃಢಪಟ್ಟು ಯಾವುದೇ ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿಯೇ ಐಸೋಲೇಷನ್ ಆದವರಿಗೆ ಪ್ರತಿದಿನ ಅವರ ಆಕ್ಸಿಜನ್ ಸ್ಯಾಚುಲೇಶನ್ ಲೇವೆಲ್ ಪರೀಕ್ಷಿಸಲು ಉಪಯೋಗವಾಗುವಂತೆ ಫಲ್ಸ್ ಆಕ್ಸೀ ಮೀಟರ್ ಆರೋಗ್ಯ ಇಲಾಖೆ ಮುಖಾಂತರ ನೀಡಲು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಸೂಚಿಸಿದ್ದು, ತಕ್ಷಣದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10.00 ಲಕ್ಷ ಬಿಡುಗಡೆಗೊಳಿಸಿ ಖರೀದಿಸಿದ ಫಲ್ಸ್ ಆಕ್ಸೀಮೀಟರ್ ನ್ನು ಇಂದು ಆರೋಗ್ಯ ಇಲಾಖೆ ಹಸ್ತಾಂತರಿಸಲಾಯಿತು.
ಕೋವಿಡ್ ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿ ಐಸೋಲೇಷನ್ ಆದವರ ಮನೆಗೆ ಪ್ರತಿನಿತ್ಯ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿ ಅವರ ಸ್ಯಾಚುರೇಶನ್ ಲೆವೆಲ್ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ವೈದ್ಯಕೀಯ ತಜ್ಞರ ಪ್ರಕಾರ ಸೋಂಕು ದೃಢಪಟ್ಟವರು ತಮ್ಮ ಫಲ್ಸ್ ಸಾಚ್ಯುಲೇಶನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದ ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೆ ಅವರ ಆರೋಗ್ಯ ತಕ್ಷಣದಲ್ಲಿ ಸುಧಾರಿಸುತ್ತದೆ.
ನಿರ್ಲಕ್ಷ್ಯ ವಹಿಸಿದರೆ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸೊಂಕು ದೃಢಪಟ್ಟವರ ಸ್ಯಾಚುಲೇಶನ್ ಲೆವೆಲ್ ದಿನಾ ಪರೀಕ್ಷೆ ಮಾಡಬೇಕು. ಇದಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ. 10.00 ಲಕ್ಷ ವೆಚ್ಚದಲ್ಲಿ ಫಲ್ಸ್ ಆಕ್ಷೀ ಮೀಟರ್ ಖರೀದಿ ಮಾಡಲಾಗಿದೆ. ಇದನ್ನು ಕೋವಿಡ್ ಸೋಂಕು ದೃಢಪಟ್ಟು ಮನೆಯಲ್ಲಿ ಐಸೋಲೇಶನ್ ಆದವರ ಮನೆಗೆ ಮತ್ತೆ ವಾಪಸ್ ಪಡೆಯುವ ಷರತ್ತು ವಿಧಿಸಿ ನೀಡಿ ಎಂದು ಸೂಚಿಸಿ ಟಾಸ್ಕ್ ಫೋರ್ಸ್ ತಂಡ ಪ್ರತಿನಿತ್ಯ ಅವರ ಆರೋಗ್ಯ ಸ್ಥಿತಿ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.