LATEST NEWS
ಕೇವಲ ಸೈಕೋ ಬಾಂಬರ್ ಅನ್ಕೊಂಡಿದ್ದ ಪೊಲೀಸರಿಗೆ ಶಾಕ್ ನೀಡಿದ ಆದಿತ್ಯರಾವ್….!
ಕೇವಲ ಸೈಕೋ ಬಾಂಬರ್ ಅನ್ಕೊಂಡಿದ್ದ ಪೊಲೀಸರಿಗೆ ಶಾಕ್ ನೀಡಿದ ಆದಿತ್ಯರಾವ್….!
ಉಡುಪಿ ಜನವರಿ 25:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯನ ತನಿಖೆ ನಡೆಯುತ್ತಿದ್ದು, ಇಂದು ಆತನ ಹುಟ್ಟೂರಾದ ಉಡುಪಿ ಜಿಲ್ಲೆಯಲ್ಲಿ ವಿಚಾರಣೆ ನಡೆಸಲಾಯಿತು. ಆದರೆ ಉಡುಪಿಯಲ್ಲಿ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಶಾಕ್ ಆಗಿದ್ದು, ಬಾಂಬ್ ಅಲ್ಲದೆ ಸೈನೈಡ್ ಕೂಡ ಆದಿತ್ಯನ ಲಿಸ್ಟ್ ನಲ್ಲಿರುವುದು ತಿಳಿದು ಬಂದಿದೆ.
ಮಂಗಳೂರು ಏರ್ಪೋರ್ಟಿಗೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸೈಕೋ ಬಾಂಬರ್ ತನಿಖೆ ಶುರುವಾಗಿದೆ. ತನಿಖೆ ವೇಳೆ ಮಾಹಿತಿಗಳನ್ನು ಬಹಿರಂಗ ಮಾಡಿರುವ ಆದಿತ್ಯ, ಹಲವು ಬ್ಯಾಂಕಿನಲ್ಲಿ ಲಾಕರ್ ಗಳನ್ನು ಪಡೆದಿರುವ ಮಾಹಿತಿ ನೀಡಿದ್ದಾನೆ.
ತನಿಖಾಧಿಕಾರಿ ಬೆಳ್ಳಿಯಪ್ಪ ಆರೋಪಿಯನ್ನು ಕಡಿಯಾಳಿಯ ಕರ್ಣಾಟಕ ಬ್ಯಾಂಕಿಗೆ ಕರೆತಂದಿದ್ದಾರೆ. ಲಾಕರ್ ನಲ್ಲಿ ಕೆಲ ವಸ್ತುಗಳನ್ನು ಇಟ್ಟ ಬಗ್ಗೆ ಆದಿತ್ಯ ಹೇಳಿದ್ದ. 4ನೇ ಶನಿವಾರ ಬ್ಯಾಂಕ್ ರಜೆ ಇದ್ದರೂ ಬಾಗಿಲು ತೆರೆಸಿ ತನಿಖೆ ಮಾಡಲಾಗಿದೆ. ಆದರೆ ಸೈಕೋ ಬಾಂಬರ್ ಆದಿತ್ಯ ಲಾಕರ್ ನಲ್ಲಿಟ್ಟಿದ್ದ ಬಾಕ್ಸ್ ಗಳನ್ನು ತೆರೆದು ನೋಡಿದಾಗ ಚಿನ್ನದ ಆಭರಣ ಇಡುವ ಬಾಕ್ಸ್ ಪತ್ತೆಯಾಗಿದೆ. ಬಾಕ್ಸ್ ಒಳಗೆ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ.
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು, ಸರ್ಟಿಫಿಕೇಟ್ ಗಳನ್ನು ವಶಕ್ಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ತಯಾರಿ ಮಾಡಿದ್ನಾ ಎಂಬ ಬಗ್ಗೆ ಸಂಶಯ ಶುರುವಾಗಿದೆ. ಯಾಕಂದರೆ ಆದಿತ್ಯ ಲಾಕರ್ ಓಪನ್ ಮಾಡಿ ವರ್ಷ ಒಂದೂವರೆ ಕಳೆದಿದೆ.
ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಶಿಫ್ಟ್ ಮಾಡಲಾಯ್ತು. ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರಿಗೆ ಕರೆತರಲಾಯ್ತು. ಮಂಗಳೂರು ಏರ್ ಪೋರ್ಟ್ ಬಳಿ ಬಾಂಬ್ ಇಟ್ಟ ಆದಿತ್ಯ ಸೀದಾ ಮಲ್ಪೆಗೆ ಬಂದಿದ್ದಾನೆ. ಇಲ್ಲಿನ ಪೆಟ್ಟಿಗೆ ಅಂಗಡಿಯೊಂದರ ಬಳಿ ಕುಳಿತು ಇಂಡಿಗೋ ವಿಮಾನದಲ್ಲಿ ಮತ್ತೊಂದು ಬ್ಯಾಗ್ ಬಾಂಬ್ ಇಟ್ಟಿದ್ದೇನೆಂದು ಹೇಳಿ ಸಿಮ್ ಕಾರ್ಡ್ ಬಿಸಾಕಿ ಕಾಲ್ಕಿತ್ತಿದ್ದಾನೆ. ಇದನ್ನು ಮಹಜರು ವೇಳೆ ಆದಿತ್ಯನೇ ಒಪ್ಪಿಕೊಂಡಿದ್ದಾನೆ.
ಆದಿತ್ಯ ರಾವ್ ಏರ್ ಪೋರ್ಟ್ ಬಾಂಬಿಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರಿನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು- ಸಿಬ್ಬಂದಿ ಜೊತೆ ಪೊಲೀಸರು ಮಾಹಿತಿ ಪಡೆದರು. ಏರ್ ಪೋರ್ಟ್ ಅಧಿಕಾರಿಗಳ ಕೋಪದಲ್ಲಿ ಬಾಂಬ್ ಫಿಕ್ಸ್ ಮಾಡಿದ ಆದಿತ್ಯ, ಮಾನಸಿಕವಾಗಿ ಕುಗ್ಗಿದ್ದಾಗ ಸೈನೈಡ್ ಜಗಿದು ಸಾಯಲು ರೆಡಿ ಮಾಡಿಕೊಂಡಿದ್ದ ಎನ್ನವುದು ತಿಳಿದು ಬಂದಿದೆ.