Connect with us

FILM

ಪೃಥ್ವಿ ಅಂಬರ್ ಲೈಫ್ ಈಗ ಶುಗರ್ ಲೆಸ್ ಅಂಡ್ ಬ್ಯೂಟಿಫುಲ್

ಬೆಂಗಳೂರು ಅಗಸ್ಟ್ 27: ಪೃಥ್ವಿ ಅಂಬರ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, “ದಿಯಾ” ಚಿತ್ರದ ನಂತರ ಕರ್ನಾಟಕದ ರಾಜ್ಯಾದಂತ ಮನೆಮಾತಾದ ಪೃಥ್ವಿ ಅಂಬರ್ ಗೆ ಈಗ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಅರಸಿಬರಲಾರಂಭಿಸಿವೆ.ಶಶಿಧರ ಕೆ.ಎಂ. ಅವರ ನಿರ್ದೇಶನದ ‘ಶುಗರ್‌ಲೆಸ್‌’ ಚಿತ್ರಕ್ಕೆ ಪೃಥ್ವಿ ಅಂಬರ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಾಯಕನಾಗುವ ಅವಕಾಶ ಅವರನ್ನು ಹುಡುಕಿಕೊಂಡು ಬಂದಿದೆ. ಅರುಣ್‍ಕುಮಾರ್.ಎಂ ಮತ್ತು ಸಬುಅಲೋಶಿಯಸ್ ಜಂಟಿಯಾಗಿ ನಿರ್ದೇಶಿಸುತ್ತಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದಲ್ಲಿ ಪೃಥ್ವಿ ನಾಯಕನಾಗಿ ನಟಿಸಲಿದ್ದಾರೆ. ‘ಡಾಲಿ’ ಖ್ಯಾತಿಯ ನಟ ಧನಂಜಯ್‌ ಸೋಮವಾರವಷ್ಟೇ ಈ ಚಿತ್ರದ ಟೈಟಲ್‌ ಕೂಡ ಅನಾವರಣ ಮಾಡಿ, ಚಿತ್ರತಂಡದ ತಂಡದ ಬೆನ್ನು ತಟ್ಟಿದ್ದಾರೆ.

ಎರಡು ದಶಕಗಳ ಕಾಲ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅರುಣ್‍ಕುಮಾರ್.ಎಂ ಮತ್ತು ಸಬುಅಲೋಶಿಯಸ್ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರದ ಪೋಸ್ಟರ್‌ ಕೂಡ ಗಮನ ಸೆಳೆಯುವಂತಿದ್ದು, ಖಾಲಿ ರಸ್ತೆಯಲ್ಲಿ ಸ್ಕೂಟರ್ ಸವಾರಿ ಮಾಡುವ ನಾಯಕನ ಮುಖ ಪೋಸ್ಟರ್‌ನಲ್ಲಿ ಕಾಣಿಸದಿದ್ದರೂ ಪೃಥ್ವಿ ಅಂಬರ್‌ ಅವರೇ ಈ ಚಿತ್ರದ ನಾಯಕ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಉಳಿದ ತಾರಾಬಳಗ ಮತ್ತು ತಾಂತ್ರಿಕ ತಂಡದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್ ಎಚ್. ನಿರ್ಮಾಪಕರಾಗಲು ಫ್ರೈಡೇ ಫಿಲ್ಮ್ ಬ್ಯಾನರ್ ಹುಟ್ಟುಹಾಕಿದ್ದು, ಈ ಚಿತ್ರಕ್ಕೆ ಉದ್ಯಮಿ ಕಿಶೋರ್‌ ನರಸಿಂಹಯ್ಯ ಅವರ ಜತೆಗೆ ಬಂಡವಾಳ ಹೂಡುತ್ತಿದ್ದಾರೆ. ನಿರ್ಮಾಣಕ್ಕೆ ಸಿಲ್ವರ್ ಟ್ರೈನ್ ಇಂಟರ್ ನ್ಯಾಷನಲ್ ಸಹಯೋಗವಿದೆ.