DAKSHINA KANNADA
ದೇಯಿಬೈದಿತಿ ಅವಮಾನ, ಸಂಸದ ಕಟೀಲ್ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥ
ದೇಯಿಬೈದಿತಿ ಅವಮಾನ, ಸಂಸದ ಕಟೀಲ್ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥ
ಪುತ್ತೂರು, ಅಕ್ಟೋಬರ್ 10 :ತುಳುನಾಡಿನ ಕಾರ್ಣಿಕ ಪುರುಷರಾದ ಕೋಟಿ ಚೆನ್ನಯ್ಯ ರ ತಾಯಿ ದೇಯಿಬೈದಿತಿ ಮೂರ್ತಿಗೆ ಅವಮಾನ ಮಾಡಿದ ಪ್ರಕರಣವನ್ನು ಖಂಡಿಸಿ ಬಿಜೆಪಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಆರಂಭಗೊಂಡಿದೆ.
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಜಾಥಾ ಆರಂಭಗೊಂಡಿದೆ.ದೇಯಿಬೈದೆತಿ ವನ ತನಕ ಜಾಥಾ ನಡೆಯಲಿದ್ದು, ಸುಮಾರು 13 ಕಿಲೋಮೀಟರ್ ದೂರವನ್ನು ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಕ್ರಮಿಸಲಿದ್ದಾರೆ.
ಜಾಥಾದಲ್ಲಿ ಸುಮಾರು ಎರಡುಸಾವಿರಕ್ಕಿಂತ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ ಮಾತ್ರವಲ್ಲ ಅನೇಕ ಸಂಘಸಂಸ್ಥೆಗಳ ಪ್ರಮುಖರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದಾರೆ.
ಪುತ್ತೂರಿನ ಪಡುಮಲೆಯಲ್ಲಿರುವ ದೇಯಿಬೈದೆತಿ ಔಷಧವನದಲ್ಲಿನ ದೇಯಿಬೈದೆತಿ ಮೂರ್ತಿಯ ಜೊತೆ ಅಶ್ಲೀಲವಾಗಿ ಪೋಟೋ ತೆಗೆದು ಅವಮಾನ ಮಾಡಲಾಗಿತ್ತು. ಅವಮಾನ ಮಾಡಿದ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಈ ಷಡ್ಯಂತ್ರಗಳ ಹಿಂದೆ ಇರುವ ಆರೋಪಿಗಳನ್ನು ಬಂಧಿಸಬೇಕೆಂಬ ಪ್ರಮುಖ ಬೇಡಿಕೆಯನ್ನು ಪ್ರತಿಭಟನಾಕಾರರು ಮುಂದಿಟ್ಟು ಈ ಜಾಥಾವನ್ನು ಏರ್ಪಡಿಸಲಾಗಿದೆ.