Connect with us

    DAKSHINA KANNADA

    ಲವ್ ಜಿಹಾದ್ ತಡೆಗೆ ವಿಶೇಷ ಪೋಲೀಸ್ ಪಡೆ ಮತ್ತು ಹಲಾಲ್ ಸರ್ಟಿಫಿಕೇಟ್ ವಿರೋಧಿಸಿ ಪ್ರತಿಭಟನೆ

    ಪುತ್ತೂರು, ಡಿಸೆಂಬರ್ 15: ಲವ್ ಜಿಹಾದ್ ತಡೆಗೆ ವಿಶೇಷ ಪೋಲೀಸ್ ಪಡೆ ಮತ್ತು ಹಲಾಲ್ ಸರ್ಟಿಫಿಕೇಟ್ ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

    ಪುತ್ತೂರಿನ ಅಮರ್ ಜವಾನ್ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ ಮುಖಂಡ ದಿನೇಶ್ ಜೈನ್, ಲವ್ ಮಾಡಿ ಮದುವೆಯಾಗುವುದಕ್ಕೆ ವಿರೋಧವಿಲ್ಲ, ಆದರೆ ಹಿಂದು ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಿ ಆಕೆಯನ್ನು ಭಯೋತ್ಪಾದಕಿಯಾಗಿ ಮಾಡುವುದಕ್ಕೆ ವಿರೋಧವಿದೆ. ಕೊಡಗಿನ ಆಶಾ ಮತ್ತು ದೀಪ್ತೀ ಮಾರ್ಲಾ ಇದಕ್ಕೆ ಉದಾಹರಣೆ.

    ಇಬ್ಬರನ್ನೂ ಮದುವೆಯಾಗಿ ಮತಾಂತರ ಮಾಡಿ ಭಯೋತ್ಪಾದಕಿಯರನ್ನಾಗಿ ಮಾಡಲಾಗಿದೆ. ಲವ್ ಜಿಹಾದ್ ಎನ್ನುವುದು ಹಿಂದೂ ಸಂಘಟನೆಗಳು ಸೃಷ್ಠಿ ಮಾಡಿದ್ದಲ್ಲ, ಲವ್ ಜಿಹಾದ್ ಎನ್ನುವುದು ಕೇರಳದ ಹೈಕೋರ್ಟ್ ಹೇಳಿದ ವ್ಯಾಖ್ಯಾನವಾಗಿದೆ.

    ಈ ಕಾರಣಕ್ಕಾಗಿ ಲವ್ ಜಿಹಾದ್ ತಡೆ ಅನಿವಾರ್ಯವಾಗಿದೆ. ಉತ್ತರಪ್ರದೇಶ ಸರಕಾರ ಯಾವ ರೀತಿಯಲ್ಲಿ ವಿಶೇಷ ಪಡೆ ಆರಂಭಿಸಿದೆ, ಅದೇ ರೀತಿಯ ಪೋಲೀಸ್ ಪಡೆ ರಾಜ್ಯದಲ್ಲಿ ಪ್ರಾರಂಭವಾಗಬೇಕು, ವಿಶೇಷವಾಗಿ‌ ದಕ್ಷಿಣಕನ್ನಡ,ಕೊಡಗು ಮತ್ತು ಕರಾವಳಿ ಭಾಗದಲ್ಲಿ ಶೀಘ್ರವೇ ಆರಂಭವಾಗಬೇಕು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸರಕಾರ ಈ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಬೇಕು, ಅದೇ ರೀತಿ ಹಲಾಲ್ ಸರ್ಟಿಫಿಕೇಟ್ ವ್ಯವಸ್ಥೆಯನ್ನೂ ನಿಷೇಧಿಸಬೇಕು ಎಂದು ಪ್ರತಿಭಟನೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply