Connect with us

    LATEST NEWS

    ” MRPL ಗೆ ಬೀಗ ಜಡಿಯಿರಿ” ಹಗಲು ರಾತ್ರಿ ಪ್ರತಿಭಟನೆ

    ” MRPL ಗೆ ಬೀಗ ಜಡಿಯಿರಿ” ಹಗಲು ರಾತ್ರಿ ಪ್ರತಿಭಟನೆ

    ಮಂಗಳೂರು ಮಾರ್ಚ್ 22: ಮಾಲಿನ್ಯ ನಿಯಂತ್ರಣಕ್ಕಾಗಿ ಸರಕಾರ ಹೊರಡಿಸಿರುವ ಆದೇಶವನ್ನು ಪಾಲಿಸದೇ ಅಹಂಕಾರ ಮತ್ತು ಜನವಿರೋಧಿ ನೀತಿಯನ್ನು ಪಾಲಿಸುತ್ತಿದ್ದಾರೆ ಆರೋಪಿಸಿ ಎಂಆರ್ ಪಿಎಲ್ ವಿರುದ್ದ ನಾಗರೀಕ ಹೋರಾಟ ಸಮಿತಿ ಜೋಕಟ್ಟೆ, ಮತ್ತು ಎಂಆರ್ ಪಿಎಲ್ ವಿಸ್ತರಣಾ ವಿರೋಧಿ ಸಮಿತಿ ಸುರತ್ಕಲ್ ವತಿಯಿಂದ ಎಂಆರ್ ಪಿಎಲ್ ಗೇಟಿನ ಎದುರು MRPL ಗೆ ಬೀಗ ಜಡಿಯಿರಿ ಹಗಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಎಂಆರ್ ಪಿಎಲ್ ನ ಘಟಕಗಳು ಉಂಟು ಮಾಡಿರುವ ಮಾಲಿನ್ಯ ಸುತ್ತಮುತ್ತಲಿನ ಗ್ರಾಮಗಳ ಬದುಕನ್ನು ನರಕವನ್ನಾಗಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯ ಸರಕಾರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಆದೇಶ ನೀಡಿದರೂ ಅದನ್ನು ಪಾಲಿಸದೆ ಎಂಆರ್ ಪಿಎಲ್ ಅಂಹಕಾರ ತೋರಿಸುತ್ತಿದೆ ಎಂದು ಆರೋಪಿಸಿದರು.

    ಅಲ್ಲದೆ ಎಂಆರ್ ಪಿಎಲ್ ನಾಲ್ಕನೇ ಹಂತದ ವಿಸ್ತರಣೆಗಾಗಿ ಸುಮಾರು 1 ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಕ್ಕೆ ಪಡೆಯುತ್ತಿದ್ದು. ಕಂಪೆನಿ ವಿಸ್ತರಣೆಯಾದರೇ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಮಂಗಳೂರು ಇನ್ನೊಂದು ಬೋಪಾಲ್ ಆಗಲಿದೆ ಎಂದು ಆರೋಪಿಸಿದರು.

    ಸ್ಥಳೀಯ ಜನರ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಹೊರಡಿಸಿರುವ ಆದೇಶನ್ನು ತಿರಸ್ಕರಿಸಿರುವ ಎಂಆರ್ ಪಿಎಲ್ ಕಂಪೆನಿಗೆ ಬೀಗ ಜಡಿಯಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply