Connect with us

    MANGALORE

    ಎಮ್ ಆರ್ ಪಿ ಎಲ್ ಗೆ ಬೀಗ ಜಡಿಯಲು ಒತ್ತಾಯಿಸಿ ಮಾರ್ಚ್ 22, 23 ರಂದು ಹಗಲು ರಾತ್ರಿ ಧರಣಿ

    ಎಮ್ ಆರ್ ಪಿ ಎಲ್ ಗೆ ಬೀಗ ಜಡಿಯಲು ಒತ್ತಾಯಿಸಿ ಮಾರ್ಚ್ 22, 23 ರಂದು ಹಗಲು ರಾತ್ರಿ ಧರಣಿ

    ಮಂಗಳೂರು ಮಾರ್ಚ್ 19: ಕೋಕ್ ಸಲ್ಪರ್ ಘಟಕದ ಮಾಲಿನ್ಯದಿಂದ ಕಂಗೆಟ್ಟಿರುವ ಸ್ಥಳೀಯ ಗ್ರಾಮಗಳ ಪರಿಸ್ಥಿತಿ ಸರಿಪಡಿಸಲು ಸರಕಾರ ಹೊರಡಿಸಿರುವ ಆದೇಶ ದಿಕ್ಕರಿಸುತ್ತಿರುವ ಹಾಗೂ ಉದ್ಯೋಗ ಸೃಷ್ಟಿಸದೆ ಮತ್ತೆ ಸಾವಿರ ಎಕರೆ ಭೂಮಿ ವಶಪಡಿಸಲು ಯತ್ನಿಸುತ್ತಿರುವ ಎಮ್ ಆರ್ ಪಿ ಎಲ್ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಅಲ್ಲದೆ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಎಮ್ ಆರ್ ಪಿ ಎಲ್ ಕಂಪೆನಿಗೆ ಬೀಗ ಜಡಿಯಲು ಒತ್ತಾಯಿಸಿ ಮಾರ್ಚ್ 22, 23 ರಂದು ಎಮ್ ಆರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ಹಗಲು ರಾತ್ರಿ ಧರಣಿ ನಡೆಸಲು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ, MRPL ವಿರೋಧಿ ಸಮಿತಿ ಸುರತ್ಕಲ್ ನಿರ್ಧರಿಸಿದೆ.

    MRPL ಮಾಲಿನ್ಯದ ವಿರುದ್ದ ಗ್ರಾಮಸ್ಥರ ಹೋರಾಟದ ಪಲವಾಗಿ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. MRPL ಯಾವುದೇ ಕ್ರಮಕೈಗೊಳ್ಳದೆ ಜನರನ್ನು ವಂಚಿಸುತ್ತಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ. ಅಲ್ಲದೇ ಉದ್ಯೋಗ ಸೃಷ್ಠಿಸದೆ ಮತ್ತೆ ಸಾವಿರಾರು ಏಕರೆ ಭೂಮಿ ಸ್ವಾಧೀನಕ್ಕೆ ಯತ್ನಿಸುತ್ತಿದ್ದು, ಕಂಪೆನಿಯು ತನ್ನ ವಾಗ್ದಾನದಂತೆ ಉದ್ಯೋಗವನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿದೆ.

    ಬದಲಿಗೆ ಸುತ್ತಲಿನ ಹತ್ತಾರು ಗ್ರಾಮಗಳು ಕೆಮಿಕಲ್ ಮಾಲಿನ್ಯದಿಂದ ಬಳಲುವಂತೆ, ರೋಗಪೀಡಿತರಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಸರಕಾರದ ಆದೇಶ ಪಾಲಿಸದ, ಮಾಲಿನ್ಯ ತಡೆಯದ, ಉದ್ಯೋಗ ಸೃಷ್ಟಿಸದ, ಮತ್ತೆ ಸಾವಿರ ಎಕರೆ ಭೂಮಿ ಕಬಳಿಸಲು ಯತ್ನಿಸುತ್ತಿರುವ mrpl ಬೀಗ ಜಡಿಯಲು ಒತ್ತಾಯಿಸಿ ಹಗಲು‌ ರಾತ್ರಿ ಧರಣಿ ಹಮ್ಮಿಕೊಂಡಿರುವುದಾಗಿ ಸಮಿತಿಯ ಮುಖಂಡರಾದ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *