LATEST NEWS
ಖಾಸಗಿ ಬಸ್ ಸಿಬ್ಬಂದಿ ನಿರ್ಲಕ್ಷಕ್ಕೆ ಪ್ರಾಣ ಬಿಟ್ಟ ಹಿರಿ ಜೀವ…!!

ಮಂಗಳೂರು ಸೆಪ್ಟೆಂಬರ್ 12: ಖಾಸಗಿ ಬಸ್ ನ ಚಾಲಕ ಮತ್ತು ನಿರ್ವಾಹಕ ನ ನಿರ್ಲಕ್ಷಕ್ಕೆ ಮಹಿಳೆಯೊಬ್ಬರು ಬಸ್ ನಿಂದ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ಮಾರೂರು ಗ್ರಾಮದ ಕುಂಟೋಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಮಾರೂರು ಗ್ರಾಮದ ನಿವಾಸಿ 66 ವರ್ಷ ಪ್ರಾಯದ ನೀಲಮ್ಮ ಎಂದು ಗುರುತಿಸಲಾಗಿದೆ. ಇಂದು ಅವರು ಮೂಡಬಿದ್ರೆಗೆ ತೆರಳಲು ಖಾಸಗಿ ಬಸ್ ಹತ್ತಲು ಹೋಗಿದ್ದಾರೆ. ಖಾಸಗಿ ಬಸ್ ನ ಮುಂಬಾಗಿಲನ್ನು ಹತ್ತುವ ವೇಳೆ ಬಸ್ ನ ನಿರ್ವಾಹಕ ಒಮ್ಮೆಲೇ ವಿಶಿಲ್ ಉದಿದ್ದಾನೆ. ಈ ವೇಳೆ ಬಸ್ ಚಾಲಕನೂ ಬಸ್ ನ್ನು ಚಲಾಯಿಸಿದ್ದು, ಬಸ್ ಹತ್ತುತಿದ್ದ ನೀಲಮ್ಮ ಅವರು ಬಸ್ ನಿಂದ ಕೆಳಗೆ ಬಿದ್ದಿದ್ದಾರೆ. ನೀಲಮ್ಮ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವನಪ್ಪಿದ್ದಾರೆ.

ಈ ಘಟನೆ ಕುರಿತಂತೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ನ ಚಾಲಕ ಹಾಗೂ ನಿರ್ವಾಹಕರನ್ನು ಪೊಲೀಸರು ವಶಕ್ಕೆ ಪಡೆದು ಸೂಕ್ತ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಖಾಸಗಿ ಬಸ್ಸನ್ನು ವಶಕ್ಕೆ ಪಡೆದಿದ್ದು ಆರ್.ಟಿ.ಓ ಪರಿಶೀಲನೆಗಾಗಿ ವರದಿ ನೀಡಲಾಗಿದೆ. ಮೃತದೇಹವನ್ನು ಶವ ಪರೀಕ್ಷೆಯ ನಂತರ ವಾರಸುದಾರರಿಗೆ ಬಿಟ್ಟುಕೊಡಲಾಗಿದೆ.