Connect with us

    LATEST NEWS

    ಆಗುಂಬೆ ಘಾಟಿಯಲ್ಲಿ ಸೈಡ್ ಕೊಡಲಿಲ್ಲ ಎಂದು ಖಾಸಗಿ ಬಸ್ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ

    ಆಗುಂಬೆ ಘಾಟಿಯಲ್ಲಿ ಸೈಡ್ ಕೊಡಲಿಲ್ಲ ಎಂದು ಖಾಸಗಿ ಬಸ್ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ

    ಶಿವಮೊಗ್ಗ ಜುಲೈ 2: ಕಾರಿಗೆ ಸೈಡ್ ಕೊಡಲಿಲ್ಲವೆಂದು ಖಾಸಗಿ ಬಸ್ ನ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೆಬ್ರಿ ಬಳಿ ನಡೆದಿದೆ.

    ಶಿವಮೊಗ್ಗದಿಂದ- ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸಿನ ನಿರ್ವಾಹಕ ಗಣೇಶ್ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಅಲ್ಲದೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಗಾಯಗೊಂಡಿರುವ ಬಸ್ ನ ನಿರ್ವಾಹಣ ಗಣೇಶ್ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಖಾಸಗಿ ಬಸ್ ಶಿವಮೊಗ್ಗದಿಂದ ಮಂಗಳೂರಿಗೆ ಬರುತ್ತಿದ್ದು, ಆಗುಂಬೆ ಘಾಟಿಯಲ್ಲಿ ಬರುವಾಗ ಹಿಂದೆ ಬರುತ್ತಿದ್ದ ಕಾರಿನವರು ನಿರಂತರ ಹಾರ್ನ್ ಮಾಡಿದ್ದಾರೆ. ಆದರೆ ಆಗುಂಬೆ ಘಾಟಿಯಲ್ಲಿ ತಿರುವುಗಳು ಇದ್ದ ಕಾರಣ ಚಾಲಕ ವಾಹನಕ್ಕೆ ಸೈಡ್ ಕೊಟ್ಟಿರಲಿಲ್ಲ. ಅಲ್ಲದೆ ಬಸ್ ಬಾಗಿಲ ಬಳಿ ಇದ್ದ ನಿರ್ವಾಹಕ ಕಾರಿನಲ್ಲಿ ಇದ್ದವರಿಗೆ `ಸ್ವಲ್ಪ ತಾಳಿ, ಹಾರ್ನ್ ಮಾಡಬೇಡಿ’ ಎಂದಿದ್ದಾರೆ.

    ಇಷ್ಟಕ್ಕೆ ಕಾರಿನಲ್ಲಿ ಇದ್ದವರು ಕೋಪಗೋಡಿದ್ದಾರೆ. ವಾಹನ ಸೋಮೇಶ್ವರ ದಾಟಿದ ನಂತರ ಕಾಡು ಪ್ರದೇಶದಲ್ಲಿ ಬಸ್ ಅಡ್ಡ ಗಟ್ಟಿ ನಿರ್ವಾಹಕನನ್ನು ಬಸ್ಸಿನಿಂದ ಹೊರಗೆಳೆದು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ. ಅಲ್ಲದೆ ಬಸ್ಸಿನ ಒಳಗಡೆ ಕೂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಪುಂಡರ ಆರ್ಭಟಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಸುಮ್ಮನೆ ಕುಳಿತಿದ್ದದ್ದು ವಿಪರ್ಯಾಸವಾಗಿದ್ದು, ಯಾರೊಬ್ಬರು ನಿರ್ವಾಹಕನ ಸಹಾಯಕ್ಕೆ ಬಂದಿಲ್ಲ.

    ಈ ಪುಂಡರು ಬೇರೆ ಊರಿನಿಂದ ಈ ಭಾಗಕ್ಕೆ ಪ್ರವಾಸ ಬಂದವರು ಎನ್ನಲಾಗಿದ್ದು, ಹಲ್ಲೆಯ ದೃಶ್ಯಾವಳಿಗಳು ಬಸ್ಸಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *