Connect with us

    LATEST NEWS

    ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ : ಇಮ್ಮಡಿಯಾಗಿದೆ ಬಿಜೆಪಿ ಕಾರ್ಯಕರ್ತರ ಉತ್ಸಾಹ

    ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ : ಇಮ್ಮಡಿಯಾಗಿದೆ ಬಿಜೆಪಿ ಕಾರ್ಯಕರ್ತರ ಉತ್ಸಾಹ

    ಮಂಗಳೂರು, ಡಿಸೆಂಬರ್ 18 : ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಮಂಗಳೂರು ಅಗಮಿಸಿ ನಗರದಲ್ಲಿ ವಾಸ್ಯವ್ಯ ಹೂಡಲಿದ್ದಾರೆ. ಇದಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾದ ಸಿದ್ದತೆಗಳು ಪೂರ್ಣಗೊಂಡಿವೆ.

    ಪ್ರಧಾನಿ ಮೋದಿ ಅವರ  ಇಂದಿನ ಮಂಗಳೂರು ಭೇಟಿ ಈ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತಂದಿದೆ. ಮಾತ್ರವಲ್ಲ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ.

    ಕಾರಣ ತಮ್ಮ ನೆಚ್ಚಿನ ನಾಯಕರು ಮಂಗಳೂರಿಗೆ ಆಗಮಿಸಿ ನಗರದಲ್ಲಿ ವಾಸ್ಯವ್ಯ ಹೂಡುತ್ತಿದ್ದಾರೆ ಎಂಬ ಸಂತೋಷ ಇಲ್ಲಿನ ಕಾರ್ಯಕರ್ತರಿಗೆ ಇದೆ.

    ಮತ್ತೊಂದೆಡೆ ಈ ಬಾರಿಯ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆಯಲ್ಲಿ  ಭಾರತೀಯ ಜನತಾ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗಳಿಸುವ ಮೂಲಕ ವಿಜಯ ಶಾಲಿಯಾಗಿರುವುದು ಕಾರ್ಯಕರ್ತರ ಉತ್ಸಾಹ ಇಮ್ಮಡಿ ಆಗಲು ಪ್ರಮುಖ ಕಾರಣವಾಗಿದೆ.

    ಇನ್ನೂ ನಾಲ್ಕೈದು ತಿಂಗಳೊಳಗೆ ಇಲ್ಲಿನ ವಿಧಾನ ಸಭಾ ಚುನಾವಣೆ  ನಡೆಯಲಿದೆ. ಪ್ರಸ್ತುತ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.

    ಉತ್ತಮ ಮತ್ತು ಅನೇಕ ಜನಪರ ಕಾರ್ಯಕ್ರಮಗಳನ್ನು ಅದು ಅನುಷ್ಟಾನಗೊಳಿಸುವ ಮೂಲಕ ಜನಪರ ಸರ್ಕಾರ ಎಂದು ಬಿಂಬಿತವಾಗಿದೆ. ರಾಜಕೀಯ ಹೊರತು ಪಡಿಸಿ ಅಂಥಹುದು ಎನ್ನುವ ವಿರೊಧಿ ಅಲೆ ಕೂಡ ಕಡಿಮೆ.

    ರಾಜ್ಯ ಬಿಜೆಪಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಳಕೊಂಡ  ಅಧಿಕಾರ ಈ ಬಾರಿ ಶತಾಯ ಗತಾಯ ವಾಪಸ್ಸು ಪಡೆಯಲೇ ಬೇಕೆಂಬ  ಪಣ ತೊಟ್ಟಿದೆ.

    ಅದರೆ ರಾಜ್ಯ ಬಿಜೆಪಿ ನಾಯಕರುಗಳಲ್ಲಿ ಅಷ್ಟೊಂದು ಒಮ್ಮತ, ಒಗ್ಗಟು ಇಲ್ಲ. ರಾಜ್ಯ ನಾಯಕರ ಮಧ್ಯೆ ಇರುವ ಭಿನ್ನಮತ.

    ಇದು ಸ್ಥಳೀಯ ಪಕ್ಷದ ಕಾರ್ಯಕರ್ತರಿಗೆ ಭಾರಿ ಬೇಸರ ತಂದಿತ್ತು. ಅದರೆ ಗುಜರಾತ್ ಮತ್ತು ಹಿಮಚಲ ಪ್ರದೇಶ ಗೆಲ್ಲುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯವನ್ನು ಮೆರೆದಿದೆ.

    ಗುಜರಾತ್, ಹಿಮಾಚಲ ಪ್ರದೇಶ  ಚುನಾವಣೆಯಲ್ಲಿ ಬಿಜೆಪಿ ಗೆಲುವು ಮುಂಬರುವ ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ತಮ್ಮ ಕಾರ್ಯಕರ್ತರಿಗೆ ಸಜ್ಜಾಗಲು ಒಂದು ಪ್ರಬಲ ಟಾನಿಕ್ ಆಗಿದೆ.

    ಈ ನಿಟ್ಟಿನಲ್ಲಿ ಕೆಲಸ ಮಾಡಲು ಅದು  ತನ್ನ ಕಾರ್ಯಕರ್ತರಿಗೆ ಪ್ರೆರಣೆ, ಉತ್ಸಾಹ  ನೀಡಲಿದೆ.

    ಇಲ್ಲಿನ ಬಿಜೆಪಿ ಕಾರ್ಯಕರ್ತರು ಸ್ಥಳೀಯ , ರಾಜ್ಯ ನಾಯಕರಿಗಿಂತ ಪ್ರಧಾನಿ ಮೋದಿ ಮತ್ತು ರಾಷ್ಟ್ರಧ್ಯಕ್ಷ ಅಮಿತ್ ಷಾ ಅವರ  ಮೇಲೆ ಹೆಚ್ಚು ವಿಶ್ವಾಸ ಇರಿಸಿದ್ದಾರೆ.

    ಈ ವಿಶ್ವಾಸ ತೋರಿಸುವ ಸಲುವಾಗಿ ಈ ಬಾರಿ ಪ್ರಧಾನಿ ಮೋದಿ ಅವರ ಮಂಗಳೂರು ಭೇಟಿ ಸಂದರ್ಭದಲ್ಲಿ ಪಕ್ಷಕ್ಕೆ ತಮ್ಮ ನಿಷ್ಠೆ ತೋರಿಸುವ ಸಲುವಾಗಿ ಅತೀ ಹೆಚ್ಚಿನ ಮತ್ತು ದಾಖಲೆಯ ಸಂಖ್ಯೆಯಲ್ಲಿ ಆಗಮಿಸಿ ಭವ್ಯವಾದ ಸ್ವಾಗತವನ್ನು ಮತ್ತು ಪಕ್ಷಕ್ಕೆ ತಮ್ಮ ನಿಷ್ಢೆಯನ್ನು ತೋರಿಸುವ ಸಾಧ್ಯತೆಗಳಿವೆ.

    ವಿಡಿಯೋಗಾಗಿ…

     

    Share Information
    Advertisement
    Click to comment

    Leave a Reply

    Your email address will not be published. Required fields are marked *