Connect with us

DAKSHINA KANNADA

ದಕ್ಷಿಣಕನ್ನಡ ಜಿಲ್ಲೆಯ ಅರ್ಚಕರಿಗೆ ಅತೀ ಚಿಕ್ಕ ವಯಸ್ಸಿಗೆ ತಿರುವನಂತಪುರ ಅನಂತಪದ್ಮವಾಭ ಸ್ವಾಮಿ ದೇಗುಲದ ಪೆರಿಯ ನಂಬಿ ಪಟ್ಟ

ತಿರುವನಂತಪುರ ಜನವರಿ 30: ದೇಶದ ಅತ್ಯಂತ ಶ್ರೀಮಂತ ದೇವಸ್ಥಾನ ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲದ ಪೆರಿಯ ನಂಬಿ ಪಟ್ಟ ಅತೀ ಕಿರಿಯ ವಯಸ್ಸಿಗೆ ದಕ್ಷಿಣಕನ್ನಡ ಜಿಲ್ಲೆಯ ಅರ್ಚಕರಿಗೆ ಒಲಿದಿದೆ.


ಈಗ ಕಳೆದ ಆರು ತಿಂಗಳ ಹಿಂದೆ ಇಲ್ಲಿಗೆ ಪ್ರಧಾನ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡ ಕೊಕ್ಕಡದ ದಿ. ಸುಬ್ರಾಯ ತೋಡ್ತಿಲ್ಲಾಯರ ಮಗ ಬಡೆಕ್ಕರ ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯ 45 ವ. ಇವರಿಗೆ ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಮಹತ್ತರವಾದ ಗೌರವ ಇರುವ ಮಹಾ ಪ್ರಧಾನ ಅರ್ಚಕ ಸ್ಥಾನ ದೊರೆತಿದೆ.


ಅಕ್ಕರದೇಶಿ ಪ್ರತಿನಿಧಿಯಾಗಿರುವ ಪೆರಿಯ ನಂಬಿ ಅಥವಾ ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಅನಂತ ಪದ್ಮನಾಭ ಸ್ವಾಮಿ ಸಂಸ್ಥಾನದಿಂದ ನೀಡುವ ಕೊಡೆ ಅಥವಾ ಛತ್ರಿ ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಮಹಾ ಅರ್ಚಕ ಸ್ಥಾನವನ್ನು ಈವರೆಗೆ ಅತೀ ಸಣ್ಣ ವಯಸ್ಸಿನಲ್ಲಿ ಪಡೆದ ಯಾವುದೇ ನಿದರ್ಶನಗಳು ಇಲ್ಲ. ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಲು ಭಾಗ್ಯ ದೊರಕುವುದು ಅಂದರೆ ವೈಕುಂಠದಲ್ಲಿ ದೇವರನ್ನು ಸ್ವತಃ ಪೂಜಿಸಿದ ಗರಿಮೆ. ಅದೆಷ್ಟೋ ವರ್ಷ ಕೆಳಗಿನ ಪೂಜಾ ಅರ್ಚಕ ಸ್ಥಾನಗಳನ್ನು ಪೂರೈಸಿ ನಂತರ ಈ ಹುದ್ದೆಯ ಭಾಗ್ಯ ದೊರೆಯುವುದು ವಾಡಿಕೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *