Connect with us

LATEST NEWS

ದೈವ ಸನ್ನಿಧಿಯಲ್ಲಿ ಮಧ್ಯರಾತ್ರಿ ಬ್ರಹ್ಮರಾಕ್ಷಸ, ಪ್ರೇತ ಉಚ್ಛಾಟನೆ – ರಸ್ತೆಯಲ್ಲಿ ಜನಸಂಚಾರ ಸಂಪೂರ್ಣ ಬಂದ್

ಮಂಗಳೂರು ಜನವರಿ 30: ಪ್ರೇತ ಕಾಟ ಹೆಚ್ಚಾದ ಕಾರಣ ಅದರ ಉಚ್ಚಾಟನೆ ಹಾಗೂ ಅನ್ಯಪ್ರೇತ ಉಚ್ಛಾಟನೆಗಾಗಿ ನಗರದ ಕೊಟ್ಟಾರ ಸಮೀಪ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.


ಕೊಟ್ಟಾರದ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಬ್ಯಾನರ್ ಆಳವಡಿಸಲಾಗಿತ್ತು, ಅದರಂತೆ ಉಚ್ಚಾಟನೆ ಕ್ರಮವನ್ನು ಬುಧವಾರ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮ ನೆರವೇರಿದೆ. ಈ ಸಂದರ್ಭ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿರ್ಬಂಧಿಸಿದ್ದರು.

ದೈವಸ್ಥಾನ ಜೀರ್ಣೋದ್ಧಾರ ಮಾಡಲು ತಾಂಬೂಲ ಪ್ರಶ್ನೆ ಕೇಳಲಾಯಿತು. ಆಗ ಇಲ್ಲಿ ಬ್ರಹ್ಮರಾಕ್ಷಸ, ಪ್ರೇತಾತ್ಮಗಳಿರುವುದು ಕಂಡು ಬಂದಿತ್ತು. ಜೀರ್ಣೋದ್ಧಾರಕ್ಕೂ ಮೊದಲು ಉಚ್ಚಾಟನೆ ಆಗಬೇಕು ಅಂತಾ ಬಂದಿತ್ತು ಎಂದಿದ್ದಾರೆ. ಅಮವಾಸ್ಯೆ ರಾತ್ರಿ 12 ಗಂಟೆ ವೇಳೆಗೆ ಪ್ರೇತಾತ್ಮ ಉಚ್ಚಾಟಣೆ ನಡೆಯಲಿದೆ. ಆಗ ಸುತ್ತಮುತ್ತ ಉಚ್ಚಾಟನೆ ವಿಧಿ ವಿಧಾನ ನಡೆಯುತ್ತೆ. ಹಾಗಾಗಿ ಈ ರೀತಿ ಮನವಿ ಮಾಡಿ ಬ್ಯಾನರ್ ಹಾಕಲಾಗಿದೆ ಎಂದು ಹೇಳಿದ್ದಾರೆ. ಬುಧವಾರ ರಾತ್ರಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರೇತ ಉಚ್ಚಾಟಣೆ ನೇರವರಿಸಲಾಗಿತ್ತು, ಈ ವೇಳೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಲಾಕ್ ಡೌನ್ ಸ್ಥಿತಿ ನಿರ್ಮಾಣವಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *