LATEST NEWS
ಅಕ್ರಮ ದಾಖಲೆಗಳಿಗೆ ಸಹಿ ಹಾಕಲು ಒತ್ತಡ; ಕೇರಳ ರಾಜ್ಯಪಾಲರ ಆರೋಪ
ನವದೆಹಲಿ, ನವೆಂಬರ್ 26: ಕೇರಳ ಸರ್ಕಾರದ ವತಿಯಿಂದ ಕೆಲವೊಂದು ಅಕ್ರಮ ದಾಖಲೆಗಳಿಗೆ ಸಹಿ ಹಾಕುವಂತೆ ತಮಗೆ ಕೇಳಿಕೊಳ್ಳಲಾಗಿತ್ತು ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ನವದೆಹಲಿಯಲ್ಲಿ “ಟೈಮ್ಸ್ ನೌ’ ಸುದ್ದಿ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕಾರ ಸಿಗಲಿ, ಅಧಿಕಾರವನ್ನು ಸಂವಿಧಾನಬದ್ಧವಾಗಿಯೇ ನಡೆಸಬೇಕೇ ಹೊರತು ಅಧಿಕಾರದಲ್ಲಿ ಇರುವ ವ್ಯಕ್ತಿಗೆ ಅನುಸಾರವಾಗಿ ಅಲ್ಲ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪ ಮಾಡಿರುವಂತೆ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವ ಅಂಶದ ಬಗ್ಗೆ ದಾಖಲೆಗಳನ್ನು ಮುಂದೆ ಇರಿಸಲಿ. ಕೇರಳ ಸರ್ಕಾರದ ವತಿಯಿಂದ ಕೆಲವೊಂದು ಆಡಳಿತಕ್ಕೆ ಸೂಕ್ತ ಅಲ್ಲದ ನಿಲುವು ಮತ್ತು ಕಾನೂನುಗಳಿಗೆ ಸಹಿ ಹಾಕುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿತ್ತು’ ಎಂದು ಆರೋಪ ಮಾಡಿದ್ದಾರೆ.
ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿರುವ ಬಗ್ಗೆ ಕೇರಳ ಸರ್ಕಾರ ಸಾಬೀತು ಮಾಡಿದ್ದೇ ಆದಲ್ಲಿ ಹುದ್ದೆಗೆ ರಾಜೀನಾಮೆ ನೀಡುವೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿಕೊಂಡಿದ್ದಾರೆ.