FILM
ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಾಯಿಯಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ

ಮುಂಬೈ: ಬಾಲಿವುಡ್ ನ ಖ್ಯಾತ ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.
ಪ್ರೀತಿ ಜಿಂಟಾ ಅವರು ಜೀನ್ ಗುಡ್‌ಇನಫ್ ಅವರನ್ನು 2016ರ ಫೆಬ್ರುವರಿ 29ರಂದು ಮದುವೆಯಾಗಿದ್ದು, ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ. ತಮಗೆ ಅವಳಿ ಮಕ್ಕಳಾಗಿರುವ ಬಗ್ಗೆ ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ಇನಫ್ ದಂಪತಿ ಈ ವಿಚಾರವನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ಅವಳಿ ಮಕ್ಕಳಿಗೆ ಜೈ ಜಿಂಟಾ ಗುಡ್‌ಇನಫ್ ಮತ್ತು ಜಿಯಾ ಜಿಂಟಾ ಗುಡ್‌ಇನಫ್ ಎಂಬ ಹೆಸರು ಇರಿಸಲಾಗಿದೆ. ಅವರನ್ನು ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಜಿಂಟಾ ಪೋಸ್ಟ್ ಮಾಡಿದ್ದಾರೆ.