KARNATAKA
ಅಪರೇಷನ್ ಥಿಯೇಟರ್ ಒಳಗೆ ವೈದ್ಯರ ಪ್ರೀವೆಡ್ಡಿಂಗ್ ಶೂಟ್

ಚಿತ್ರದುರ್ಗ ಫೆಬ್ರವರಿ 09 : ಇಬ್ಬರು ವೈದ್ಯ ಜೋಡಿ ಪ್ರೀ ವೆಡ್ಡಿಂಗ್ ಶೂಟ್ ಗೆ ಅಪರೇಷನ್ ಥಿಯೇಟರ್ ಬಳಕೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಹೊಳಲ್ಕೆರೆ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಯುವ ವೈದ್ಯ, ಪತ್ನಿಯನ್ನಾಗಿ ವೈದ್ಯರನ್ನೇ ಆರಿಸಿಕೊಂಡಿದ್ದಾರೆ. ಇವರು ಪ್ರೀ ವೆಡ್ಡಿಂಗ್ ಶೂಟ್ ಗೆ ಭರಮಸಾಗರದ ಆಸ್ಪತ್ರೆಯ ಆಪರೇಷನ್ ಥಿಯೇಟರನ್ನೇ ಲೊಕೇಷನ್ ಆಗಿ ಮಾಡಿಕೊಂಡು ಶೂಟಿಂಗ್ ಮಾಡಿದ್ದಾರೆ. ಹಾಸಿಗೆ ಮೇಲೆ ರೋಗಿಯೋರ್ವನನ್ನು ಮಲಗಿಸಿ ವೈದ್ಯ ಕೈಯಲ್ಲಿ ಕತ್ತರಿ ಹಿಡಿದಿದ್ದರೆ, ಭಾವಿ ಪತ್ನಿ ಆತನಿಗೆ ಸಹಾಯ ಮಾಡುತ್ತಿರುವ ದೃಶ್ಯವಿದು. ಅಂತಿಮವಾಗಿ ಆಪರೇಷನ್ ಮುಗೀತು ಎಂದಾಕ್ಷಣ ರೋಗಿ ದಿಗ್ಗನೆ ಎದ್ದು ಕುಳಿತುಕೊಳ್ಳುತ್ತಾನೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ವಿಷಯ ನನ್ನ ಗಮನಕ್ಕೆ ಬಂದಿದ್ದು ಪರಿಶೀಲಿಸುತ್ತಿದ್ದೇನೆ. ಈ ಬಗ್ಗೆ ನೋಟಿಸ್ ನೀಡುತ್ತೇನೆ ಎಂದು ಹೇಳಿದರು.
