LATEST NEWS
ಬ್ಯೂಟಿ ಪಾರ್ಲರ್ ಮೆಟ್ಟಿಲೇರಿದ ಪ್ರಯಾಗ್ ರಾಜ್ ಕುಂಭಮೇಳದ ಸುಂದರಿ ಮೊನಾಲಿಸಾ
ಪ್ರಯಾಗ್ ರಾಜ್ ಜನವರಿ 21: ಸಾಮಾಜಿಕ ಜಾಲತಾಣದಲ್ಲಿ ಪ್ರಯಾಗ್ ರಾಜ್ ಕುಂಭಮೇಳದ ಮೊನಾಲಿಸಾ ಎಂದು ಸುದ್ದಿಯಾಗಿರುವ ಬೆಡಗಿ ರುದ್ರಾಕ್ಷಿ ಮಾರುವ ಮೊನಾಲಿಸಾ ಇದೀಗ ಸೆಲೂನ್ ಮೆಟ್ಟಿಲೇರಿದ್ದಾಳೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ವೈರಲ್ ಆಗಿರುವ ಕಂದು ಮೈಬಣ್ಣ, ಆಕರ್ಷಕ ಕಣ್ಣುಗಳು, ಮುಗ್ಧ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಈಕೆಯ ಹೆಸರು ಮೊನಾಲಿಸಾ, ಮಧ್ಯಪ್ರದೇಶದ ಇಂದೋರ್ ನಿವಾಸಿ, ರುದ್ರಾಕ್ಷಿ ಮಾರುತ್ತಾ ಇದ್ದ ಬೆಡಗಿ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೆ ತಡ ರಾತ್ರೋರಾತ್ರಿ ಟ್ರೆಂಡ್ ಆಗಿದ್ದಾಳೆ. ಆಕೆಯನ್ನು ಹುಡುಕಿಕೊಂಡು ಕುಂಭಮೇಳಕ್ಕೆ ಬರುವ ಜನ ಜಾಸ್ತಿಯಾಗಿ ಈಗ ಈಕೆಯನ್ನು ಆಕೆಯ ತಂದೆ ಮನೆಗೆ ಕಳುಹಿಸಿದ್ದಾರೆ.
ಈ ಬ್ಯೂಟಿಶಿಯನ್ ಒಬ್ಬಳು ಆಕೆಯ ಲುಕ್ ನ್ನು ಬದಲಾಯಿಸಿದ್ದಾಳೆ. ಸಹಜ ಸೌಂದರ್ಯಕ್ಕೆ ಹೊಸ ಲುಕ್ ಕೊಟ್ಟಿದ್ದಾರೆ. ಅವರ ಹೇರ್‌ಸ್ಟೈಲ್ ಅನ್ನೂ ಬದಲಾಯಿಸಿದ್ದಾರೆ. ಇದರಿಂದ ಮತ್ತೊಂದು ಮನಮೋಹಕ ರೂಪದಲ್ಲಿ ಮೊನಾಲಿಸಾ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ಕುರಿತು ವಿಡಿಯೊ ಗಮನ ಸೆಳೆದಿದೆ.