LATEST NEWS
ದೇಹ ದಾನದ ಮೂಲಕ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ ಪ್ರತೀಕ್ಷಾ
ದೇಹ ದಾನದ ಮೂಲಕ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ ಪ್ರತೀಕ್ಷಾ
ಮಂಗಳೂರು, ನವೆಂಬರ್ 02 : ಮಂಗಳೂರಿನ ಅಶೋಕನಗರದ ನಿವಾಸಿ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿ ಯವರ ಮುದ್ದಿನ ಸುಪುತ್ರಿ ಕುಮಾರಿ ಪ್ರತೀಕ್ಷಾ. ನಗರದ ಶಾರದಾ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು ಪ್ರತಿಕ್ಷಾ. ತನ್ನ ಹತ್ತನೇ ವಯಸ್ಸಿಗೆ ತನ್ನ ಶತ್ರುಗಳಿಗೂ ಬರಬಾರದಂತಹ ಬಲವಾದ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಾಗ ಕುಟುಂಬದವರ, ಹಿತೈಷಿಗಳ ಹಾಗೂ ಶಾಲೆಯ ಸಹಕಾರದಿಂದ ಆ ಕಾಯಿಲೆಯನ್ನು ಧೈರ್ಯ್ಯದಿಂದ ಎದುರಿಸಿ ಮೆಟ್ಟಿ ನಿಂತಿದ್ದಳು ಪ್ರತೀಕ್ಷಾ. ಆದರೆ ಆದರೆ ವಿಧಿಯಾಟ ಬೇರೆನೇ. ಮತ್ತೆ ಆ ಕಾಯಿಲೆ ಈ ಮಗುವನ್ನು ಬಲಿಪಡೆದುಕೊಂಡಿತು. ಕಳೆದ 4 ತಿಂಗಳುಗಳಿಂದ ತೀವ್ರವಾಗಿ ಬಾಧಿಸುತ್ತಿದ್ದ ಕಾಯಿಲೆಯಿಂದಾಗಿ ಶಾಲೆಗೆ ಹಾಜರಾಗಲು ಪ್ರತೀಕ್ಷಾಗೆ ಅಸಾಧ್ಯವಾದರೂ ಶಾಲೆಯ ಶಿಕ್ಷಕರು ಪ್ರತೀಕ್ಷಳ ಮನೆಗೆ ತೆರಳಿ ಧೈರ್ಯ ತುಂಬುತ್ತಿದ್ದರು. ಈ ಎಲ್ಲದರ ಮಧ್ಯೆ ತಾನು ಈ ಕಾಯಿಲೆಯಿಂದ ಬದುಕುಳಿಯುವುದು ಅಸಾಧ್ಯವೆಂಬುದನ್ನು ಅರಿತ ಆ ಮುಗ್ಧ ಬಾಲೆ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಹತ್ತಿರ ಕರೆದು, ಅಮ್ಮಾ ಒಂದು ವೇಳೆ ನನ್ನ ಆತ್ಮ ದೇವರಿಗೆ ಪ್ರಿಯವಾದರೆ, ನನ್ನ ಅಂತ್ಯಸಂಸ್ಕಾರ ಮಾಡದೆ ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಎಂದು ನಿವೇದಿಸಿಕೊಂಡಳು.ಮುದ್ದಿ ಮಗಳ ಅನಿರೀಕ್ಷಿತ ನಿವೇದನೆಯಿಂದ ದಿಗ್ರಮೆಗೊಂಡ ತಾಯಿ ಮೂಕವಿಸ್ಮಿತರಾಗಿ ಮೂರ್ಚೆಹೋದರು. ಹೀಗೆ ಹೇಳಿದ ಎರಡೇ ದಿವಸಕ್ಕೆ ಪ್ರತೀಕ್ಷ ಇಹಲೋಕ ತ್ಯಜಿಸಿ ದೇವರ ಪಾದ ಸೇರಿದಳು. ಮಗುವಿನ ಕೊನೆಯ ಇಚ್ಛೆಯಂತೆ ತಂದೆ ತಾಯಿ ಬಂಧು ಬಳಗದವರು ದೇಹವನ್ನು ಕೆಎಂಸಿ ಆಸ್ಪತ್ರೆಗೆ ದಾನ ಮಾಡಿದರು. ಮಗುವಿನ ಅಂತಿಮ ದರ್ಶನ ಪಡೆಯಲು ಬಂದ ಶಾರದಾ ವಿದ್ಯಾಲಯದ ಆಡಳಿತ ಮುಖ್ಯಸ್ಥರಾದ ಪ್ರೊ. ಎಂ.ಬಿ ಪುರಾಣಿಕ್ ಸಹಿತ ಅಂತಿಮ ದರ್ಶನಕ್ಕೆ ಆಗಮಿಸಿದ ಬಂಧು ವರ್ಗದವರುಗೆ, ಶಾಲಾ ಸಹಪಾಠಿಗಳು, ಶಾಲಾ ಶಿಕ್ಷಕ ವೃಂದದವರು ದು:ಖ ಸಹಿಸಲಾಗದೆ ಅತ್ತುಬಿಟ್ಟರು. ಹೀಗೆ ಎಳೆಯ ಮುಗ್ದ ವಯಸ್ಸಿನಲ್ಲೇ ಮರಣದ ಅಪ್ಪುಗೆಯಲ್ಲೂ ಇತರರಿಗಾಗಿ ದೇಹದಾನ ಮಾಡುವ ಮೂಲಕ ಸಾರ್ಥತಕತೆ ಮೆರೆದು ಆಕಾಶ ನಕ್ಷತ್ರವಾದಳು ಪ್ರತೀಕ್ಷಾ.