FILM
ಎರಡನೇ ರೌಂಡ್… ಈಗ ಪ್ಯಾಂಟ್ಗಳು ಫಿಟ್ ಆಗಲ್ಲ- ಎರಡನೇ ಮಗು ನಿರೀಕ್ಷೆಯಲ್ಲಿ ನಟಿ ಪ್ರಣಿತಾ ಸುಭಾಷ್

ಬೆಂಗಳೂರು ಜುಲೈ 25: ಕನ್ನಡದ ಖ್ಯಾಟ ನಟಿ ಪ್ರಣಿತಾ ಸುಭಾಷ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಣಿತಾ ಜೂನ್ 2022ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗುವಿಗೆ ಈ ದಂಪತಿ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ ಇದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಣಿತಾ ಸುಭಾಷ್ ಅವರು 2021ರ ಮೇ 30ರಂದು ಮದುವೆ ಆದರು. ಉದ್ಯಮಿ ನಿತಿನ್ ರಾಜು ಜೊತೆ ವಿವಾಹ ಆಗಿದ್ದಾರೆ. ಕೊವಿಡ್ ಇದ್ದ ಕಾರಣ ಸಿಂಪಲ್ ಆಗಿ ಈ ಮದುವೆ ನೆರವೇರಿತ್ತು.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಣಿತಾ ಮಾಹಿತಿ ಹಂಚಿಕೊಂಡಿದ್ದಾರೆ. ‘ಎರಡನೇ ರೌಂಡ್. ಈಗ ಪ್ಯಾಂಟ್ಗಳು ಫಿಟ್ ಆಗಲ್ಲ’ ಎಂದು ಅವರು ಹೇಳಿದ್ದಾರೆ.