ಉಡುಪಿ ಅಕ್ಟೋಬರ್ 04: ಸಿಬಿಐ ಪರೇಶ್ ಮೇಸ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ವರದಿ ಅತ್ಯಂತ ಮೋಸದಿಂದ ಮಾಡಿದ ವರದಿಯಾಗಿದ್ದು, ಕೇಂದ್ರ ಸರ್ಕಾರ ಕೇಸ್‌ನ್ನು ರೀ ಓಪನ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಪರೇಶ್ ಮೇಸ್ತ ಕೊಲೆಯನ್ನು ಸಹಜ ಸಾವು ಅನ್ನೋದು ತಪ್ಪು. ಈ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿದೆ. ನಾನು ಇದನ್ನು ಧಿಕ್ಕರಿಸುತ್ತೇನೆ, ವಿರೋಧಿಸುತ್ತೇನ. ಇದು ಅತ್ಯಂತ ಮೋಸ ಮಾಡಿದ ವರದಿಯಾಗಿದ್ದು, ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ ಎಂದು ಆಪಾದಿಸಿದರು.
ತಪ್ಪತಸ್ಥರು ಮುಸ್ಲಿಂ ಗೂಂಡಾ ಕಿಡಿಗೇಡಿಗಳು. ಈ ವರದಿಯಿಂದ ಹಿಂದೂ ಸಮಾಜಕ್ಕೆ, ಆತನ ಕುಟುಂಬಕ್ಕೆ ತೀರಾ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.