Connect with us

    LATEST NEWS

    ಪ್ರಚಾರ ವಾಹನದ ವಿನ್ಯಾಸದಲ್ಲಿ ನನ್ನ ಪಾತ್ರ ಇಲ್ಲ- ಪ್ರಮೋದ್ ಮಧ್ವರಾಜ್

    ಪ್ರಚಾರ ವಾಹನದ ವಿನ್ಯಾಸದಲ್ಲಿ ನನ್ನ ಪಾತ್ರ ಇಲ್ಲ- ಪ್ರಮೋದ್ ಮಧ್ವರಾಜ್

    ಉಡುಪಿ ಮಾರ್ಚ್ 17: ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರಕ್ಕಾಗಿ ನಿರ್ಮಿಸಲಾಗಿರುವ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಕಾಂಗ್ರೆಸ್ ಚಿಹ್ನೆ ಯಾವುದು ಇಲ್ಲದ ಕಾರಣ ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ಮಾಡಿದ್ದು ಅಭಿಮಾನಿ ಬಳಗ, ಈ ವಾಹನ ತಯಾರು ಮಾಡುವ ಹಿಂದೆ ನನ್ನ ಮುತುವರ್ಜಿ ಏನೂ ಇಲ್ಲ ಎಂದು ಹೇಳಿದರು.

    ವಾಹನದಲ್ಲಿ ಹೊರಭಾಗದಲ್ಲಿ ನಾಯಕರ ಫೋಟೋ ಇರದಿದ್ರೂ, ತೋರಿಸುವ ವೀಡಿಯೋದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರ ಫೋಟೋ ಇದೆ ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನರ ಗಮನವನ್ನು ಸೆಳೆಯಲು ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದಾರಷ್ಟೇ ಆದರೆ ಬ್ರೇಕಿಂಗ್ ನ್ಯೂಸ್ ಹೇಳಿ ಆರೋಪಗಳುಳ್ಳ ವೀಡಿಯೋ ಪ್ರಕಟಿಸಿದ್ದಾರಷ್ಟೇ, ಈ ರೀತಿ ಬ್ರೇಕಿಂಗ್ ನ್ಯೂಸ್ ನ ಕೊಡುತ್ತೆನೆ ಎಂದು ಹೇಳಿ ಅಪಹಾಸ್ಯಕ್ಕೀಡಾಗಿದ್ದಾರೆ ಎಂದು ಹೇಳಿದರು. ನಾನು ಸಂಜೆ ಬ್ರೇಕಿಂಗ್ ನ್ಯೂಸ್  ಕೊಡ್ತೇನಂದ್ರೆ ಎಲ್ರೂ ಟಿವಿ ಮುಂದೆ ಕುಳಿತುಕೊಳ್ತಾರೆ ಆದರೆ ಕುತೂಹಲ ಮೂಡಿಸುವ ಬ್ರೇಕಿಂಗ್ ನ್ಯೂಸ್ ಸಂಜೆ ಹೊತ್ತಿಗೆ ಟುಸ್ ಆಗಿದೆ ಎಂದು ವ್ಯಂಗ್ಯವಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply