LATEST NEWS
ಕಾಂಗ್ರೇಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾದ ಬಿಜೆಪಿ ಹಿರಿಯ ನಾಯಕಿ
ಕಾಂಗ್ರೇಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾದ ಬಿಜೆಪಿ ಹಿರಿಯ ನಾಯಕಿ
ಉಡುಪಿ ಏಪ್ರಿಲ್ 23: ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ್ರಮೋದ್ ಮಧ್ವರಾಜ್ ಅವರ ತಾಯಿ ಬಿಜೆಪಿ ಹಿರಿಯ ನಾಯಕಿ ಮನೋರಮಾ ಮಧ್ವರಾಜ್ ಉಪಸ್ಥಿತರಿದ್ದರು. ಕಾಂಗ್ರೇಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ಮುಖಂಡರೊಬ್ಬರಿದ್ದದು ವಿಶೇಷವಾಗಿತ್ತು.
ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ರಘಪತಿ ಭಟ್ ಅವರ ತಾಯಿಯ ಕಾಲು ಹಿಡಿದು ಆಶೀರ್ವಾದ ಪಡೆದರು. ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ತಾಯಿ ಸರಸ್ವತಿ ಅವರೊಂದಿಗೆ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಮೋದ್ ಮದ್ವರಾಜ್ ಕೂಡ ನಾಮಪತ್ರ ಸಲ್ಲಿಸಿಲು ಆಗಮಿಸಿದ್ದು ಈ ಸಂದರ್ಭದಲ್ಲಿ ರಘುಪತಿ ಭಟ್ ಅವರ ತಾಯಿ ಸರಸ್ವತಿ ಅವರ ಬಳಿ ತೆರಳಿ ಅವರ ಕಾಲುಹಿಡಿದು ಆಶೀರ್ವಾದ ಪಡೆದರು. ಎದುರಾಳಿ ಅಭ್ಯರ್ಥಿ ತಾಯಿಯ ಕಾಲು ಮಟ್ಟಿ ರಾಜಕೀಯಕ್ಕಿಂತ ಸಂಸ್ಕಾರ ಮುಖ್ಯ ಎಂದು ತೊರಿಸಿದರು ಎಂಬ ಚರ್ಚೆ ಉಡುಪಿಯಲ್ಲಿ ಆರಂಭವಾಗಿದೆ.
You must be logged in to post a comment Login