LATEST NEWS
ಸಿದ್ದರಾಮಯ್ಯ ಅವರಿಂದ ಕಮ್ಯುನಲ್ ರಾಜಕಾರಣ – ಪ್ರಕಾಶ್ ಜಾವ್ಡೇಕರ್
ಸಿದ್ದರಾಮಯ್ಯ ಅವರಿಂದ ಕಮ್ಯುನಲ್ ರಾಜಕಾರಣ – ಪ್ರಕಾಶ್ ಜಾವ್ಡೇಕರ್
ಮಂಗಳೂರು ಜನವರಿ 23: ರೈಲ್ವೇ ಸ್ಟೇಷನ್ ನಲ್ಲಿ ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾಗಿದ್ದಾರೆ, ಕೃಷಿ ಕುಟುಂಬದ ವೆಂಕಯ್ಯನಾಯ್ಡು ಉಪರಾಷ್ಟ್ರಪತಿಯಾಗಿದ್ದಾರೆ, ಬಡತನದಿಂದ ಬಂದು ಉನ್ನತ ಹುದ್ದೆ ಏರೋದು ಬಿಜೆಪಿ ಸಂಸ್ಕ್ರತಿಯಾಗಿದೆ ಆದರೆ ಕಾಂಗ್ರೆಸ್ ನಲ್ಲಿ ಇಂತಹ ಪರಂಪರೆ ಇಲ್ಲ ಅಲ್ಲಿ ಎನಿದ್ದರೂ ಏಕಕುಟುಂಬದ ಅಭಿವೃದ್ಧಿ ಮಾತ್ರ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಏನು ? ಕೇವಲ ಕೊಲೆ ಸುಲಿಗೆ ಗೂಂಡಾಗಿರಿ.
ರಾಜ್ಯದಲ್ಲಿ ಹಿಂದೂ ಹುಡುಗಿಯರ ನಾಪತ್ತೆಯಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ರ ಕಮ್ಯುನಲ್ ರಾಜಕಾರಣಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದರು,. ಎನ್ ಕೌಂಟರ್ ನಲ್ಲಿ ಸತ್ತ ದನಕಳ್ಳನಿಗೆ ಲಕ್ಷಾಂತರ ರೂಪಾಯಿ ಪರಿಹಾರ ನೀಡ್ತಾರೆ ಆದರೆ ಹತ್ಯೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳ ಕಡೆ ಸರ್ಕಾರ ತಿರುಗಿನೋಡಲ್ಲ ಎಂದು ಆರೋಪಿಸಿದರು.
ಇಂದಿರಾ ಕ್ಯಾಂಟೀನ್ ,ಅನ್ನಭಾಗ್ಯಕ್ಕೆ ಕೇಂದ್ರ ದ ಕೊಡುಗೆ ಇದೆ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಹಣ ಇದೆ ಆದರೆ ಸಿದ್ದರಾಮಯ್ಯ ಮಾತ್ರ ಫ್ರೀ ಕೊಡುವ ಮಾತನಾಡುತ್ತಿದ್ದಾರೆ ಅನ್ನಭಾಗ್ಯ ಸಿದ್ದರಾಮಯ್ಯ ರ ಯೋಜನೆಯಲ್ಲ ಅನ್ನಭಾಗ್ಯ ಮೋದಿಭಾಗ್ಯದಿಂದ ಬಂದಿದೆ ಎಂದು ಹೇಳಿದರು.