Connect with us

    LATEST NEWS

    ಗಾಂಜಾ ಪೂರೈಕೆ ಜಾಲದ ಕಿಂಗ್ ಪಿನ್ ಅರೆಸ್ಟ್

    ಗಾಂಜಾ ಪೂರೈಕೆ ಜಾಲದ ಕಿಂಗ್ ಪಿನ್ ಅರೆಸ್ಟ್

    ಮಂಗಳೂರು ಜನವರಿ 23: ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರ ನಿದ್ದೆಗೆಡಿಸಿದ್ದ ಗಾಂಜಾ ಪೂರೈಕೆ ಜಾಲದ ಕಿಂಗ್ ಪಿನ್ ನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ಇತ್ತೀಚೆಗೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಗಳು ಹೆಚ್ಚುತ್ತಿದ್ದು , ಮಂಗಳೂರು ಗಾಂಜಾ ಹಬ್ ಆಗಿ ಪರಿವರ್ತಿತಗೊಳ್ಳುತ್ತಿದೆ ಎನ್ನುವ ಸಂಶಯ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಪ್ರತಿದಿನ ಜಿಲ್ಲೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣವನ್ನು ಪತ್ತೆ ಹಚ್ಚುತ್ತಲೇ ಇದ್ದರು. ಇದೀಗ ಪೊಲೀಸರಿಗೆ ಪ್ರಮುಖವಾದ ಬ್ರೇಕ್ ಸಿಕ್ಕಿದ್ದು, ಗಾಂಜಾ ಪೂರೈಕೆ ಜಾಲದ ಕಿಂಗ್ ಪಿನ್ ಸಲೀಂ ಬಾಷಾ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇತ್ತೀಚೆಗೆ ಕೇರಳ ಗಡಿ ಭಾಗವಾದ ತಲಪಾಡಿಯ ತೌಡುಗೋಳಿಯಲ್ಲಿ 10 ಕಿಲೋ ಗಾಂಜಾ ಸಹಿತ ಮಹಮ್ಮದ್ ಎಂಬ ಆರೋಪಿ ಬಂಧಿತನಾಗಿದ್ದ. ಆರೋಪಿ ಮಹಮ್ಮದ್ ನನ್ನು ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಮಹಮ್ಮದ್ ನೀಡಿದ ಮಾಹಿತಿಯಂತೆ ಕೊಣಾಜೆ ಪೊಲೀಸರು ಆಂಧ್ರಕ್ಕೆ ತೆರಳಿದ್ದರು. ಮಂಗಳೂರು ದಕ್ಷಿಣ ಎಸಿಪಿ ರಾಮರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮೇರು ಎಂಬಲ್ಲಿ ಸಲೀಂ ಬಾಷಾ ನನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply