BANTWAL
ಬಂಟ್ವಾಳದ ನಿವಾಸಿ ಪ್ರಜ್ವಲ್ ಸುರತ್ಕಲ್‌ನಲ್ಲಿ ಸಮುದ್ರಪಾಲು..!!
ಸುರತ್ಕಲ್: ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ ಸಂಜೆ ಸುರತ್ಕಲ್ ಮುಕ್ಕ ರೆಡ್ ರಾಕ್ ಕಡಲ ಕಿನಾರೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ. ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಇಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.