BANTWAL
ಎಮ್ಮೆ ಮೇಯಿಸೋರಿಗೆ 70 ಲಕ್ಷ ವಾಚ್ ಎಲ್ಲಿಂದ ಬಂತು – ಪ್ರಹ್ಲಾದ್ ಜೋಷಿ
ಎಮ್ಮೆ ಮೇಯಿಸೋರಿಗೆ 70 ಲಕ್ಷ ವಾಚ್ ಎಲ್ಲಿಂದ ಬಂತು – ಪ್ರಹ್ಲಾದ್ ಜೋಷಿ
ಬಂಟ್ವಾಳ ಮಾರ್ಚ್ 5: ಸಿಎಂ ಸಿದ್ಧರಾಮಯ್ಯ ಗೆ 70 ಲಕ್ಷ ರೂಪಾಯಿ ವಾಚ್ ಅವರ ತಾತ ಮುತ್ತಾತ ಕೊಟ್ಟಿರೋದಾ ಅಂತಾ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ವ್ಯಂಗ್ಯವಾಡಿದ್ದಾರೆ.
ಬಂಟ್ವಾಳ ದ ಬಿ ಸಿ ರೋಡ್ ನಲ್ಲಿ ನಡೆದ ಜನಸುರಕ್ಷಾ ರ್ಯಾಲಿ ಸಂದರ್ಭದಲ್ಲಿ ಮಾತನಾಡಿದ ಅವರು ಸಿಎಂ ಈ ಹಿಂದೆ ಎಮ್ಮೆ ಕಾಯಿಸ್ತಿದ್ದೆ ಅಂತಾ ಹೇಳಿದ್ರು..ಎಮ್ಮೆ ಮೇಯಿಸೋರು ಎಲ್ಲಾದ್ರೂ 70 ಲಕ್ಷದ ವಾಚ್ ಕಟ್ಕೊಳ್ತಾರಾ? ಅಂತಾ ಸಿಎಂ ರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಎಮ್ಮೆ ಕಾಯಿಸ್ತಿದ್ದೋರು ಈಗ ಕತ್ತೆ ಕಾಯ್ಬೇಡಿ ಅಂತಾನೂ ಜೋಷಿ ಟೀಕೆ ಮಾಡಿದ್ದಾರೆ.
ದೇಶದಲ್ಲಿ ಏನೇ ಘಟನೆ ನಡೆದರೂ ಆರ್.ಎಸ್.ಎಸ್ ಕಾರಣ ಎನ್ನಲಾಗುತ್ತಿದೆ, ಕಲಬುರ್ಗಿ,ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯುವ ಮೊದಲು ಆರ್.ಎಸ್.ಎಸ್ ಎನ್ನುವ ಜಡ್ಜಮೆಂಟ್ ನೀಡುತ್ತಾರೆ.
ಶರತ್, ಪ್ರಶಾಂತ್ ಬಲಿದಾನಕ್ಕೆ ಪರೋಕ್ಷವಾಗಿ ಕಾರಣವಾದ ಕಾಂಗ್ರೇಸ್ ಮುಖಂಡನನ್ನು ಶಾಶ್ವತವಾಗಿ ಮನೆಗೆ ಕಳುಹಿಸಬೇಕು ಎಂದು ಪ್ರಹ್ಲಾದ ಜೋಶಿ ಹೇಳಿದರು.
ತ್ರಿವಳಿ ತಲಾಕ್ ಗೂ ನಿಶೇಧ ಕಾಯ್ದೆ ಕಾಂಗ್ರೇಸ್ ವಿರೋಧ ಮಾಡಿದ್ದು , ಮುಸ್ಲಿಮರಿಗೆ ಹೆಚ್ಚೆಚ್ಚು ಮದುವೆ ಮಾಡಿಸಿ ಹೆಚ್ಚು ಮಕ್ಕಳನ್ನು ಹೆಡೆದರೆ ತಮಗೆ ಮತ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ತ್ರಿವಳಿ ತಲಾಕ್ ಗೆ ವಿರೋಧಿಸಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನ ಪಕ್ಕದಲ್ಲಿ ಅತ್ಯಾಚಾರದ ಆರೋಪಿ ವೇಣುಗೋಪಾಲ್ ಇಟ್ಟುಕೊಂಡು ಅಮಿತ್ ಶಾ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ ಎಂದು ಹೇಳಿದರು.
ವಾಚು, ಸ್ಟೀಲ್ ಬ್ರಿಡ್ಜ್, ಕೆ.ಆರ್.ಡಿ.ಸಿ ಕಾಮಗಾರಿಗಳಿಗೆ 20 % ಕಮಿಷನ್ ಎಲ್ಲಾ ಜಿಲ್ಲೆಯಿಂದ ಪಡೆಯುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಷಿ ಆರೋಪಿಸಿದ್ದಾರೆ.