Connect with us

LATEST NEWS

ಉಪೇಂದ್ರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಾಹಿತಿ ಇಲ್ಲ – ಶೋಭಾ ಕರಂದ್ಲಾಜೆ

ಉಪೇಂದ್ರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಾಹಿತಿ ಇಲ್ಲ – ಶೋಭಾ ಕರಂದ್ಲಾಜೆ

ಉಡುಪಿ ಮಾರ್ಚ್ 5: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಲ್ಲಿ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಉಪೇಂದ್ರ ಪಕ್ಷ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹದ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ಭಾರತೀಯ ಜನತಾ ಪಾರ್ಟಿ ಒಂದು ಸಮುದ್ರವಾಗಿದ್ದು, ಈ ಸಮುದ್ರಕ್ಕೆ ಯಾವುದೇ ನೀರು ಹರಿದು ಬಂದರು ಸ್ವೀಕಾರ ಮಾಡುತ್ತೆ ಎಂದು ತಿಳಿಸಿದ್ದಾರೆ.

ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಯಾವುದೇ ಕಲಾವಿದರು, ಮುಖಂಡರು ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವವರನ್ನು ಬಿಜೆ‌ಪಿ ಸ್ವಾಗತಿಸುತ್ತೆ ಎಂದು ಹೇಳಿದರು.

ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ, ಅದೇ ಪಕ್ಷದಲ್ಲಿ ಮುಂದುವರಿಸುತ್ತಾರೋ ಅಥವಾ ಬಿಜೆಪಿ ಜೊತೆ ಮರ್ಜ್ ಮಾಡುತ್ತಾರೋ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Facebook Comments

comments