FILM
50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ….!!

ಬೆಂಗಳೂರು ಜೂನ್ 13: ಭಾರತದ ಮೈಕಲ್ ಜಾಕ್ಸನ್ ಖ್ಯಾತಿ ನಟ ನತ್ಯಸಂಯೋಜಕ ಪ್ರಭುದೇವ 50 ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 2020 ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಭುದೇವ ಇದು ನಿಜ. 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು, ತುಂಬಾ ಸಂತೋಷ ಮತ್ತು ಸಂಪೂರ್ಣತೆಯ ಭಾವ ಆವರಿಸಿದೆ ಎಂದು ಹೇಳಿದ್ದಾರೆ. ಇದು ಪ್ರಭು ಕುಟುಂಬದ ಮೊದಲ ಹೆಣ್ಣು ಮಗು, ಅವರು ಹಿಂದೆ ಮದುವೆಯಾಗಿದ್ದ ಪತ್ನಿಗೆ ಮೂವರು ಗಂಡು ಮಕ್ಕಳಿದ್ದಾರೆ.

ಸಾಧ್ಯವಾದಷ್ಟು ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೇನೆ. ಈಗಾಗಲೇ ನನ್ನ ಕೆಲಸದ ಹೊರೆಯನ್ನು ಕಡಿಮೆ ಮಾಡಿದ್ದೇನೆ. ನನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.