Connect with us

  LATEST NEWS

  ಮಲ್ಪೆ – ವರ್ಷಗಳ ಕಾಲ ಹೊರಬರಲಾರದೆ ನೀರಿನ ನಡುವೆ ಸಿಕ್ಕಿಕೊಂಡಿದ್ದ 2 ಶ್ವಾನಗಳನ್ನು ರಕ್ಷಿಸಿದ ಅಪತ್ಭಾಂದವ ಈಶ್ವರ್ ಮಲ್ಪೆ.!

  ಉಡುಪಿ ಜೂನ್ 13 : ಸಮುದ್ರದಲ್ಲಿ ಅಥವಾ ನೀರಿನಲ್ಲಿ ಅವಘಡ ಸಂಭವಿಸಿದರೇ ಸದಾ ಸಹಾಯಕ್ಕೆ ಮುಂದೆ ಬರುವ ಅಪದ್ಬಾಂದವ ಈಶ್ವರ್ ಮಲ್ಪೆ ಇದೀಗ ಎರಡು ನಾಯಿ ಮರಿಗಳನ್ನು ಸಮುದ್ರದಿಂದ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಈ ನಾಯಿಗಳು ಬಂದರಿನ ಧಕ್ಕೆಯೊಳಗೆ ಹೊರ ಬರಲಾಗದೆ ಅಕ್ಷರಶಃ ಬಂಧಿಯಾಗಿದ್ದವು. ಎಲ್ಲ ಕಡೆ ನೀರಿನಿಂದ ಆವೃತವಾಗಿರುವುದರಿಂದ ನಾಯಿಗಳು ಒಳಗೇ ಬಂಧಿಯಾಗಿದ್ದವು.


  ಧಕ್ಕೆಯಲ್ಲಿ ಯಾರಾದರೂ ಎಸೆದ ತಿಂಡಿಗಳನ್ನು ತಿಂದು ಇವು ಬದುಕಿದ್ದವು.ಈ ವಿಷಯ ಅರಿತ ಆಪದ್ಭಾಂಧವ ಈಶ್ವರ್ ಮಲ್ಪೆ ,ನಾಯಿಗಳನ್ನು ಹೊರತೆಗೆಯಲು ಮುಂದಾದರು. ಇದಕ್ಕಾಗಿ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದರು.ಹಗ್ಗ ,ಟ್ಯೂಬ್ ಮೂಲಕ ಇಳಿದು ನಾಯಿಗಳನ್ನು ಹೊರತರಲು ಪ್ರಯತ್ನಿಸಿದರು.


  ಆದರೆ ಸುಲಭದಲ್ಲಿ ಅವು ಹೊರಬರಲಿಲ್ಲ.ಸುತ್ತಲೂ ಈ ಕಾರ್ಯಾಚರಣೆ ನೋಡಲು ಧಕ್ಕೆಯಲ್ಲಿ ಸಾಕಷ್ಟು ಜನ ಸೇರಿದ್ದರು. ತಾನು ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಮೇಲೆ ಬರುವವರಲ್ಲ ,ಈಶ್ವರ್ ಮಲ್ಪೆ.ಜಾಣ್ಮೆಯಿಂದ ನಾಯಿಗಳ ಮನವೊಲಿಸಿ ,ಹಗ್ಗದ ಮೂಲಕ ಹೊರ ತೆಗೆದರು. ಈ ನಾಯಿಗಳು ವರ್ಷದಿಂದ ಒಳಗೇ ಬಂಧಿಯಾಗಿದ್ದರಿಂದ ನಡೆಯಲೂ ಆಗುತ್ತಿರಲಿಲ್ಲ.ಕೊನೆಗೂ ನಾಯಿಗಳು ಹೊರಬಂದಾಗ ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply