KARNATAKA
ಪವರ್ ಟಿವಿ ಬಂದ್ ..ರಾಜ್ಯಸರಕಾರದ ನಡೆ ವಿರುದ್ದ ಕಣ್ಣೀರಿಟ್ಟ ನಿರೂಪಕ ರಹಮಾನ್

ಬೆಂಗಳೂರು ಸೆಪ್ಟೆಂಬರ್ 29: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಮಾಡಿದ್ದರೆನ್ನಲ್ಲಾದ ಭ್ರಷ್ಟಾಚಾರದ ಕುರಿತಂತೆ ವರದಿ ಮಾಡಿದ್ದ ಕನ್ನಡ ನ್ಯೂಸ್ ಚಾನೆಲ್ ಪವರ್ ಟಿವಿಯನ್ನು ಬಂದ್ ಮಾಡಲಾಗಿದೆ.
ಈ ಕುರಿತಂತೆ ಚಾನೆಲ್ ನ ನಿರೂಪಕ ರಹಮಾನ್ ಹಾಸನ್ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು ಪವರ್ ಟಿವಿ ಮೇಲೆ ರೇಡ್ ಆಗಿದೆ. ಸಿಸಿಬಿ ಪೊಲೀಸರು, ಸರ್ಚ್ ವಾರಂಟ್ ಜೊತೆ ಬಂದಿದ್ದರು. ಅವರಿಗೆ ಬೇಕಾದ ಎಲ್ಲಾ ಡಾಕ್ಯುಮೆಂಟ್ ಗಳನ್ನು ಪಡೆದಿದ್ದಾರೆ. ನಮ್ಮ ಫೇಸ್ ಬುಕ್ ಲೈವನ್ನು ಸ್ಟಾಪ್ ಮಾಡಿದ್ದಾರೆ. ಚಾನೆಲ್ ನ್ನು ಬಂದ್ ಮಾಡಿದ್ದಾರೆ. 250 ಜನರು ಉದ್ಯೋಗಿಗಳಿರುವ ಚಾನೆಲ್ ನ್ನು ಬಂದ್ ಮಾಡಿ ಎಲ್ಲರನ್ನು ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.

ನಾವು ಸತ್ಯಕ್ಕಾಗಿ ಧ್ವನಿಯೆತ್ತಿದ್ದೇವೆ. ಸಿಎಂ ವಿಜಯೇಂದ್ರ ವಿರುದ್ದ ಧ್ವನಿಯೆತ್ತುವುದನ್ನು ಮುಂದುವರಿಸುತ್ತೇವೆ. ಇವತ್ತು ನಮ್ಮ ಕುಟುಂಬಗಳನ್ನು ಬೀದಿಗೆ ತಂದಿದ್ದೀರಿ. ನಿಮಗೇನು ಮಾಡಿದ್ದೇವೆ ಎಂದು ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.