LATEST NEWS
ಕಿಶೋರ್ ಶೆಟ್ಟಿ ಸ್ನೇಹಿತೆ ಆಸ್ಕಾ ಕುರಿತ ಸ್ಪೋಟಕ ಮಾಹಿತಿ ಬಹಿರಂಗ
ಮಂಗಳೂರು ಸೆಪ್ಟೆಂಬರ್ 29: ಮಾದಕ ಜಾಲಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಈಗಾಗಲೇ 6 ಮಂದಿಯನ್ನು ಆರೆಸ್ಟ್ ಮಾಡಿದ್ದು, ಇನ್ನು ಹಲವರ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ಮಂಗಳೂರು ಡ್ರಗ್ ಪ್ರಕರಣಕ್ಕೆ ಸಂಬಂದಿಸಿದಂತೆ ಆ್ಯಂಕರ್ ಕಂ ನಟಿ ಅನುಶ್ರೀ ವಿಚಾರಣೆಯನ್ನು ಮಂಗಳೂರು ಪೊಲೀಸರು ನಡೆಸಿದ್ದಾರೆ.
ಮಾದಕ ವಸ್ತು ಜಾಲ ಪ್ರಕರಣದಲ್ಲಿ ಈಗಾಗಲೇ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಯ ಬಂಧನದ ನಂತರ ನಡೆದ ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳು ಬಯಲಿಗೆ ಬರುತ್ತಿದ್ದು. ಇದೀಗ ಕಿಶೋರ್ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕಿಶೋರ್ ಶೆಟ್ಟಿ ಬಂಧನದ ನಂತರ ಸಿಸಿಬಿ ಪೊಲೀಸರು ಕಿಶೋರ್ ಸ್ನೇಹಿತೆಯಾಗಿರುವ ಮಣಿಪುರ ಮೂಲದ ಆಸ್ಕಾಳನ್ನು ಬಂಧಿಸಿದ್ದಾರೆ. ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಳು. ಆ ಬಳಿಕ ಕೆಲ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದಳು.
ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ ಮಂಗಳೂರಿನ ಪಬ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಕಿಶೋರ್ ಶೆಟ್ಟಿಯ ಪರಿಚಯವಾದ ಬಳಿಕ ಡ್ರಗ್ಸ್ ಪಾರ್ಟಿಗಳಿಗೆ ಪ್ರವೇಶ ನೀಡುತ್ತಿದ್ದಳು ಎನ್ನಲಾಗಿದೆ. ಡ್ರಗ್ ಟೆಸ್ಟ್ ಮಾಡಿಸಿದಾಗಲೂ ಪಾಸಿಟಿವ್ ಬಂದಿತ್ತು ಎಂದು ತಿಳಿದುಬಂದಿದೆ.
ಇನ್ನು ತನಿಖೆ ವೇಳೆ ಅನುಶ್ರೀ ಯನ್ನು ಒಮ್ಮೆ ನೋಡಿದ್ದೆನೆ ಎಂದು ಆಸ್ಕಾ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಅಲ್ಲದೆ ಬಾಲಿವುಡ್ ನ ನಟನೊಂದಿಗೆ ಗೋವಾ ಹಾಗೂ ಮುಂಬೈಗಳಲ್ಲಿ ಪಾರ್ಟಿ ಕೂಡ ಮಾಡಿದ್ದೆ ಎಂದು ಮಾಹಿತಿ ನೀಡಿದ್ದಾಳೆ ಎಂದು ಹೇಳಲಾಗಿದೆ.
ಆಸ್ಕಾ ಕಿಶೋರ್ ಗರ್ಲ್ಫ್ರೆಂಡ್ ಎನ್ನಲಾಗಿದ್ದು, ಆಕೆ ತನ್ನ ಇತರೆ ಫ್ರೆಂಡ್ಸ್ಗಳನ್ನು ಡ್ರಗ್ಸ್ ಪಾರ್ಟಿಗಳಿಗೆ ಕರೆತರುತ್ತಿದ್ದಳು ಎಂಬುದು ಬಹಿರಂಗವಾಗಿದ್ದು, ಇದೀಗ ಸಿಸಿಬಿ ಅಧಿಕಾರಿಗಳು ಆಸ್ಕಾ ಫ್ರೆಂಡ್ಸ್ಗೂ ನೋಟಿಸ್ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Facebook Comments
You may like
-
ಅಪ್ರಾಪ್ತ ಬಾಲಕಿಯ ಬೆತ್ತಲೆ ಪೋಟೋ ಬಳಸಿ ಲವ್ ಜಿಹಾದ್ ಗೆ ಯತ್ನ – ಆರೋಪಿ ಸೆರೆ
-
ಮಂಗಳೂರು ಖಾಸಗಿ ಕಾಲೇಜಿನ ರಾಗಿಂಗ್ ಪ್ರಕರಣ: 9 ವಿದ್ಯಾರ್ಥಿಗಳ ಬಂಧನ
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಪಿಪಿಇ ಕಿಟ್ ಧರಿಸಿ 20 ಕೋಟಿ ಮೌಲ್ಯದ ಚಿನ್ನ ಕದ್ದು ಸಿಕ್ಕಿಬಿದ್ದ ಖದೀಮ!
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
You must be logged in to post a comment Login