KARNATAKA
ರಾಜ್ಯ ರಾಜಕೀಯದಲ್ಲಿ ಸಂಚಲನ ತಂದ ಪೂಜಾರಿ ಭವಿಷ್ಯವಾಣಿ,’ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’..!
ಬೆಂಗಳೂರು: ಡಿ ಕೆ ಶಿವಕುಮಾರ್ (D K Shiva kumar) ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದು ಸಿದ್ದರಾಮಯ್ಯ ಸಿಎಂ ಕುರ್ಚಿ ಕಳಕೊಳ್ಳಲಿದ್ದಾರೆಂದು ಯಾದಗಿರಿ ಜಿಲ್ಲೆ ಗೋನಾಳ ಗ್ರಾಮದ ಗಡೇ ದುರ್ಗಾದೇವಿ ದೇಗುಲದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಡಿಕೆ ಶಿವಕುಮಾರಿಗೆ ಗಿರಿನಾಡಿನ ಶಕ್ತಿದೇವತೆ ಗಡೆ ದುರ್ಗಮ್ಮದೇವಿ ಮೇಲೆ ಅಪಾರ ಭಕ್ತಿಯಿದ್ದು ಹಲವು ಭಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಆರ್ಶಿವಾದ ಪಡೆದು ಉನ್ನತ ಸ್ಥಾನ ಪಡೆದಿದ್ದಾರೆ . ಇದೇ ದೇವಸ್ಥಾನ ಅರ್ಚಕ ಡಿಸಿಎಂ ಆಗಿದ್ದ ಡಿಕೆಶಿ ಅವರು ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಗಡೇ ದುರ್ಗಾದೇವಿ ದೇವಳದ ಪೂಜಾರಿಗೆ ಕನಸಿನಲ್ಲಿ ಡಿ.ಕೆ.ಶಿವಕುಮಾರ್ (D K Shiva kumar) ರಾಜ್ಯದ ಸಿಎಂ ಆಗುವ ವಾಣಿ ಬಂದಿದೆಯಂತೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇಬ್ಬರಿಗೆ ಸಿಎಂ ಸ್ಥಾನ ಸಿಗಲಿದೆ . ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎರಡನೇ ಅವಧಿಗೆ ಡಿಕೆ ಶಿವಕುಮಾರ್ ಸಿಎಂ ಎಂದು ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದರು.
ಐಟಿ, ಇಡಿ ಕೇಸ್ ನಲ್ಲಿ ಸಂಕಷ್ಟಕೀಡಾದಾಗ ಡಿಕೆಶಿ ಅವರು ಇದೇ ಗಡೇ ದುರ್ಗಾದೇವಿ ಮೊರೆ ಹೋಗಿದ್ದರು. 2020 ರ ಜನವರಿ 29 ರಂದು ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಸಂಕಷ್ಟದಿಂದ ಪಾರು ಮಾಡಿ, ರಾಜಕೀಯದಲ್ಲಿ ಉನ್ನತ ಸ್ಥಾನ ದೊರೆಯುವಂತೆ ಪತ್ರ ಬರೆದು ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದರು.
You must be logged in to post a comment Login