Connect with us

LATEST NEWS

ಲೋಕಸಭಾ ಚುನಾವಣೆಗೆ ಓಳ್ಳೆಯ ಯುವಕನನ್ನು ನಿಲ್ಲಿಸಿದ್ದೇವೆ..ಖಂಡಿತವಾಗಿಯೂ ಪದ್ಮರಾಜ್ ಗೆಲ್ಲುತ್ತಾರೆ – ಜನಾರ್ಧನ ಪೂಜಾರಿ

ಮಂಗಳೂರು ಮಾರ್ಚ್ 26: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಚುನಾವಣಾ ಕಚೇರಿ ಇಂದು ಉದ್ಘಾಟನೆಗೊಂಡಿದೆ. ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿಯವರು ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಶಿಷ್ಯನಿಗೆ ಆಶೀರ್ವದಿಸಿದರು.


ನಗರದ ಲಾಲ್ ಬಾಗ್ ಸಮೀಪ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ನ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನೆಗೊಂಡಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಹಿರಿಯ ನಾಯಕರ ಸಮ್ಮುಖದಲ್ಲಿ ಚುನಾವಣಾ ಕಾರ್ಯಾಲಯ ಉದ್ಘಾಟನೆಯನ್ನು ಹಿರಿಯ ಕಾಂಗ್ರೇಸ್ ನಾಯಕ ಜನಾರ್ಧನ ಪೂಜಾರಿಯವರು ನೆರವೇರಿಸಿದರು.


ಬಳಿಕ‌ ಕಾಂಗ್ರೆಸ್ ಮುಖಂಡರು ಕುದ್ರೋಳಿ ಶ್ರೀ ಗೋಕರ್ಣ ದೇವಸ್ಥಾನಕ್ಜೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜನಾರ್ಧನ ಪೂಜಾರಿಯವರು ಈ ಬಾರಿ ಕಾಂಗ್ಸೇಸ್ ಒಳ್ಳೆಯ ಅಭ್ಯರ್ಥಿಯನ್ನು ನಿಲ್ಲಿಸಿದೆ. ಇನ್ನು ದೇವರ ಕೈಯಲ್ಲಿದ್ದು, ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *