LATEST NEWS
ಭಾರತ್ ಬಂದ್ ಕರೆಕೊಟ್ಟು ಕಾಂಗ್ರೆಸ್ ಪಕ್ಷ ತಪ್ಪು ಮಾಡುತ್ತಿದೆ – ಪೂಜಾರಿ

ಭಾರತ್ ಬಂದ್ ಕರೆಕೊಟ್ಟು ಕಾಂಗ್ರೆಸ್ ಪಕ್ಷ ತಪ್ಪು ಮಾಡುತ್ತಿದೆ – ಪೂಜಾರಿ
ಮಂಗಳೂರು ಸೆಪ್ಟೆಂಬರ್ 9: ಪೆಟ್ರೋಲ್, ಡಿಸೇಲ್ ದರ ಖಂಡಿಸಿ ಭಾರತ್ ಬಂದ್ ಕರೆ ನೀಡಿದ ಕಾಂಗ್ರೇಸ್ ವಿರುದ್ದ ಹಿರಿಯ ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಕಿಡಿ ಕಾರಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ್ ಬಂದ್ ಗೆ ಕರೆ ಕೊಟ್ಟವರು ದೇಶ ವಿರುದ್ಧ ನಿಲುವು ತಾಳಿದಂತೆ ಎಂದು ಹೇಳಿದ ಅವರು ಭಾರತ್ ಬಂದ್ ನಿಂದಾಗಿ ದೇಶ ಉಂಟಾಗುವ ನಷ್ಟವನ್ನು ಬಂದ್ ಗೆ ಕರೆ ಕೊಟ್ಟವರೇ ಭರಿಸಬೇಕು ಎಂದರು.

ಕೇಂದ್ರ ಸರ್ಕಾರ ಈಗಲೇ ಪೆಟ್ರೋಲ್ ಮತ್ತು ಡಿಸೆಲ್ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಅಲ್ಲದೆ ಬಂದ್ ಗೆ ಕರೆ ನೀಡೋದು ಭಾರೀ ಸುಲಭ, ಎಲ್ಲರೂ ಬಂದ್ ಗೆ ಕರೆ ಕೊಡುತ್ತಾರೆ. ಆದರೆ ಬಂದ್ ನಿಂದ ಆಗುವ ನಷ್ಟಕ್ಕೆ ಬಂದ್ ಕರೆ ಕೊಟ್ಟವರು ಜವಾಬ್ದಾರರಾಗುತ್ತಾರೆ ಎಂದು ಪ್ರಶ್ನಿಸಿದ ಪೂಜಾರಿ ಯವರು ಭಾರತ್ ಬಂದ್ ಕರೆಕೊಟ್ಟು ಕಾಂಗ್ರೆಸ್ ಪಕ್ಷ ತಪ್ಪು ಮಾಡುತ್ತಿದೆ, ಇದರಿಂದ ಮುಂದೆ ಅನುಭವಿಸಬೇಕಾಗುತ್ತದೆ ಎಂದರು, ಈ ರೀತಿಯ ತಪ್ಪುಗಳನ್ನು ಮಾಡಿದ್ರೆ ಮುಂದೆ ಒಂದು ದಿವಸನೂ ಕಾಂಗ್ರೆಸ್ ಗೆ ಸರ್ಕಾರ ಮಾಡೋಕೆ ಸಾಧ್ಯ ಇಲ್ಲ ಎಂದರು.
ಪೆಟ್ರೋಲ್ ಅಕ್ರಮ ದಾಸ್ತಾನು ಮಾಡುವವರನ್ನು ಮೊದಲು ಜೈಲಿಗೆ ಹಾಕಬೇಕು, ಅಕ್ರಮ ತಡೆಗಟ್ಟಿದ್ದರೆ ಬೆಲೆ ಏರಿಕೆ ಕಡಿಮೆಯಾಗುತ್ತದೆ, ಆದರೆ ಆ ಧೈರ್ಯ ಯಾರಿಗೂ ಇಲ್ಲ, ಆ ಧೈರ್ಯ ಪ್ರಧಾನಿ ಮೋದಿಗೆ ಮಾತ್ರ ಇರೋದು ಅದರೆ ಅವರು ಮಾಡುತ್ತಾರೆಯೇ? ಎನ್ನುವುದು ಪ್ರಶ್ನೆ ಎಂದು ಹೇಳಿದರು.