Connect with us

    UDUPI

    ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತಿಗೆ ಪೂವಾನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

    ಉಡುಪಿ, ಏಪ್ರಿಲ್ 16 : ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂದಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಪೂರ್ವಾನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.


    ತಮ್ಮ ಕಚೇರಿ ಸಭಾಂಗಣದಲ್ಲಿ , ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಚಾರಪಡಿಸುವ ಪೂವಾನುಮತಿ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿವ ಆಭ್ಯರ್ಥಿಗಳು, ಚುನಾವಣಾ ಜಾಹೀರಾತುಗಳನ್ನು ಪ್ರಚಾರ ಮಾಡುವ ಮುನ್ನ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಾಮಾಣೀಕರಣ ಪಡೆದು ಪ್ರದರ್ಶಿಸಬೇಕು ಎಂದರು. ಜಾಹೀರಾತಿನಲ್ಲಿ ಇತರರಿಗೆ ದೂರುವುದು, ಅಸ್ಪಷ್ಟ ಅಥವಾ ಮಾನ ಹಾನಿಕರ , ಹಿಂಸೆ ಪ್ರಚೋದನೆ, ನ್ಯಾಯಾಲಯ ನಿಂದನೆ ,ರಾಷ್ಟ್ರದ  ಏಕತೆ ಸಾರ್ವಭೌಮತ್ವಕ್ಕೆ ವಿರುದ್ದ ಹೇಳಿಕೆ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಚಿತ್ರಣ, ದೇಶದ ಸೇನಾಪಡೆಯ ಹಾಗೂ ಸೇನಾ ವ್ಯಕ್ತಿಗಳ ಚಿತ್ರ ಮತ್ತಿತರ ನಿರ್ಬಂಧಿತ ವಿಷಯಗಳನ್ನು ಒಳಗೊಂಡಿರಬಾರದು ಎಂದರು.

    ಕಾರ್ಯಗಾರದಲ್ಲಿ ತರಬೇತಿ ನೀಡಿದ ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್ ಮಾತನಾಡಿ, ಅರ್ಜಿ ಸಲ್ಲಿಸುವವರು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿಯ ಜೊತೆಯಲ್ಲಿ ಜಾಹಿರಾತು ಒಳಗೊಂಡ ಸಿ.ಡಿ.ಯ ಎರಡು ಪ್ರತಿ, ಅದರಲ್ಲಿನ ಧ್ವನಿ ಮುದ್ರಣದ ದೃಢೀಕರಣ ಪ್ರಮಾಣಪತ್ರ, ಜಾಹೀರಾತು ವಿಷಯದ ಶೀರ್ಷಿಕೆಗಳನ್ನು ಒಳಗೊಂಡಿರಬೇಕು ಅರ್ಜಿ ಸಲ್ಲಿಸುವವರು ಅಭ್ಯರ್ಥಿಯಾದಲ್ಲಿ ಅದನ್ನು ಪ್ರಚಾರಪಡಿಸುವ 3 ದಿನಗಳ ಮೊದಲೇ ಸಲ್ಲಿಸಿ ಪೂರ್ವಾನುಮತಿ ಪಡೆಯಬೇಕು ಎಂದ ಅವರು ಅದರ ತಯಾರಿಕೆಗೆ ತಗಲುವ ವೆಚ್ಚ, ಮಾಧ್ಯಮಗಳಲ್ಲಿ ಪ್ರಚಾರಪಡಿಸಲು ತಗಲುವ ವೆಚ್ಚವನ್ನು ಚೆಕ್ ಮೂಲಕ ಪಾವತಿಸಿದ ವಿವರಗಳನ್ನು ನಮೂದಿಸಬೇಕು .

    ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಚಾರಪಡಿಸುವುದು ಸೇರಿದಂತೆ ಚಿತ್ರಣ ತಯಾರಿಕೆಯ ವೆಚ್ಚಗಳನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಭರಿಸಲಾಗುವುದು. ಅಭ್ಯರ್ಥಿಯ ಪರವಾಗಿ ಯಾವುದೇ 3 ನೇ ವ್ಯಕ್ತಿಗಳು ಜಾಹೀರಾತು ಪೂರ್ವ ಪ್ರಾಮಾಣೀಕರಣ ಅನುಮತಿ ಕೋರಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಮಾನ್ಯತೆ ಮಾಡುವುದಿಲ್ಲ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *