Connect with us

    KARNATAKA

    ಪಾಕಿಸ್ತಾನ ಆಸ್ಟ್ರೇಲಿಯಾ ಮ್ಯಾಚ್ ವೇಳೆ ಪಾಕಿಸ್ತಾನದ ಅಭಿಮಾನಿಗೆ ಪಾಕಿಸ್ತಾನ್‌ ಜಿಂದಾಬಾದ್‌ ಕೂಗದಂತೆ ತಡೆದ ಪೊಲೀಸ್ ಅಧಿಕಾರಿ

    ಬೆಂಗಳೂರು ಅಕ್ಟೋಬರ್ 21: ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವರ್ಲ್ಡಕಪ್ ಮ್ಯಾಚ್ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಪಾಕಿಸ್ತಾನ ಅಭಿಮಾನಿಗೆ ಪಾಕಿಸ್ತಾನ ಜಿಂದಾಬಾದ್ ಹೇಳದಂತೆ ತಡೆಯೊಡ್ಡಿದ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.


    ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಆಸ್ಟ್ರೇಲಿಯಾ – ಪಾಕಿಸ್ತಾನ ಪಂದ್ಯ ನಡೆಯುತ್ತಿದ್ದು ಈ ವೇಳೆ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಯೊಬ್ಬ ʻಪಾಕಿಸ್ತಾನ್‌ ಜಿಂದಾಬಾದ್‌ʼ ಘೋಷಣೆ ಕೂಗಿದ್ದಾನೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಮಾನಿಯ ಹತ್ತಿರ ಬಂದು ಪಾಕಿಸ್ತಾನ್‌ ಜಿಂದಾಬಾದ್‌ʼ ಕೂಗುವಂತಿಲ್ಲ ಎಂದು ತಡೆಯೊಡ್ಡಿದ್ದಾರೆ. ಈ ವೇಳೆ ಕೆಲಕಾಲ ವಾಗ್ದಾದ ನಡೆದಿದೆ.


    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ಬಂದು ಇಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗ ಬಾರದು ಎಂದಿದ್ದಾರೆ. ಈ ವೇಳೆ ಪಾಕ್‌ ಅಭಿಮಾನಿ, ನಾನು ಪಾಕಿಸ್ತಾನದವನು, ಪಾಕಿಸ್ತಾನ್‌ ಜಿಂದಾಬಾದ್‌ ಅನ್ನದೇ ಇನ್ನೇನು ಹೇಳಬೇಕು? ಭಾರತ್‌ ಮಾತಾಕಿ ಜೈ ಅನ್ನುವಾಗ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಯಾಕೆ ಹೇಳಬಾರದು? ಎಂದು ಅಧಿಕಾರಿಯನ್ನ ಪ್ರಶ್ನಿಸಿದ್ದಾರೆ.

    ಬಳಿಕ ಅಧಿಕಾರಿಯ ನಡೆಯನ್ನ ವೀಡಿಯೋ ಮಾಡಿಕೊಂಡಿದ್ದಾನೆ. ಪೊಲೀಸ್‌ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗುತ್ತಿದ್ದಂತೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಲು ಶುರು ಮಾಡಿದ್ದಾನೆ. ವೀಡಿಯೋ ಎಕ್ಸ್‌ನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಪಾಕಿಸ್ತಾನಿ ತನ್ನ ದೇಶಕ್ಕಾಗಿ ಹುರಿದುಂಬಿಸಲು ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನದ ಒಬ್ಬ ಅಭಿಮಾನಿ ತನ್ನ ದೇಶದ ಪರ ಘೋಷಣೆ ಕೂಗಲು ಬಿಡುತ್ತಿಲ್ಲವೆನ್ನೋದು ಖಂಡನೀಯ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಇದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply