LATEST NEWS
ಪೊಲೀಸ್ ಬಂದೋಬಸ್ತ್ ಹಿನ್ನಲೆ, ರಸ್ತೆಯಲ್ಲೇ ಉಳಿದ ವಿದ್ಯಾರ್ಥಿಗಳು,ನೌಕರರು.
ಮಂಗಳೂರು ಸೆಪ್ಟೆಂಬರ್ 7: ಬಿಜೆಪಿ ಯುವಮೋರ್ಚಾ ಇಂದು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೈಕ್ ರಾಲಿಗೆ ಭಾರೀ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೈಕ್ ರಾಲಿಯನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸುಮಾರು 4 ಸಾವಿರ ಪೋಲೀಸ್ ಪಡೆಯನ್ನು ನಿಯೋಜಿಸಿದೆ.
ಬೈಕ್ ರಾಲಿ ಆರಂಭಗೊಳ್ಳಲಿದೆ ಎನ್ನುವ ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದ ಬಳಿ ಪೋಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಮತೀಯ ಸಂಘಟನೆಗಳಾದ ಪಿಎಫ್ಐ ಸಂಘಟನೆಯ ನಿಶೇಧ ಹಾಗೂ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರಾಲಿಯನ್ನು ತಡೆಯಲು ಮಂಗಳೂರು ನಗರದಾದ್ಯಂತ ಪೋಲೀಸ್ ಸರ್ಪಗಾವಲನ್ನು ಹಾಕಲಾಗಿದೆ.
ಕ್ಷಿಪ್ರ ಸೇನಾಪಡೆಯ 110 ಸೈನಿಕರ ಪಡೆ, ಕೆ.ಎಸ್.ಆರ್.ಪಿ ತುಕಡಿ ಹಾಗೂ ಪೋಲೀಸರನ್ನೊಳಗೊಂಡ ತಂಡ ಮಂಗಳೂರು ನಗರದಾದ್ಯಂತ ಬೀಡುಬಿಟ್ಟಿದ್ದು, ಬೈಕ್ ರಾಲಿಯನ್ನು ಯಾವುದೇ ಕಾರಣಕ್ಕೂ ನಡೆಸದಂತೆ ವ್ಯೂಹ ರಚಿಸಿದೆ. ಬೈಕ್ ರಾಲಿ ಆರಂಭಗೊಳ್ಳಲಿದೆ ಎನ್ನುವ ನಗರದ ಜ್ಯೋತಿ ಅಂಬೇಡ್ಕರ್ ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿದ್ದು,
ಇದರಿಂದ ಶಾಲಾ ಕಾಲೇಜುಗಳಿಗೆ ಹಾಗೂ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಭಾರೀ ತೊಂದರೆಯಾಗಿದೆ. ಜ್ಯೋತಿ ವೃತ್ತದ ಬಳಿಯೇ ಎಲ್ಲಾ ಪೋಲೀಸ್ ವಾಹನಗಳನ್ನು ಪಾರ್ಕ್ ಮಾಡಿದ ಪರಿಣಾಮ ನಗರದಾದ್ಯಂತ ಸಂಚಾರ ದಟ್ಟಣೆ ನಿರ್ಮಾಣಗೊಂಡ ಪರಿಣಾಮ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಉ ರಸ್ತೆಯಲ್ಲೇ ಪರದಾಡುವಂತಹ ಸ್ಥಿತಿಯೂ ನಿರ್ಮಾಣಗೊಂಡಿದೆ.