DAKSHINA KANNADA
ಕಡಬ:ಸಮನ್ಸ್ ನೀಡಲು ಹೋಗಿ ಅಪ್ರಾಪ್ತೆಯನ್ನು ಗರ್ಭವತಿ ಮಾಡಿ ಗರ್ಭಪಾತ ಮಾಡಿಸಿದ ಪೊಲೀಸಪ್ಪ….!!

ಪುತ್ತೂರು ಸಪ್ಟೆಂಬರ್ 27: ಅಪ್ರಾಪ್ತೆ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡು ಆಕೆಯನ್ನು ಗರ್ಭವತಿ ಮಾಡಿದ ಕಡಬ ಠಾಣೆಯ ಸಿಬ್ಬಂದಿಯ ವಿರುದ್ದ ಕೊನೆಗೂ ದೂರು ದಾಖಲಾಗಿದೆ. ಯುವತಿಯೇ ತಂದೆ ದೂರು ನೀಡಿದ್ದು ತನ್ನ ಮಗಳನ್ನು ಬಲತ್ಕಾರ ಮಾಡಿ ಅತ್ಯಾಚಾರ ಎಸಗಿ ಇದೀಗ ಗರ್ಭವತಿಯಾಗಲು ಕಾರಣನಾಗಿದ್ದು, ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ, ಅಲ್ಲದೆ ಗರ್ಭಪಾತ ನಡೆಸಲು ಹಣವನ್ನು ಕೂಡ ಪೋಲಿಸ್ ಸಿಬ್ಬಂದಿ ಶಿವರಾಜ್ ನೀಡಿದ್ದಾನೆ ಎಂದು ಅವರು ಯುವತಿಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.
ಆರು ತಿಂಗಳ ಹಿಂದೆ ಪ್ರಕರಣವೊಂದರ ಸಂಬಂಧ ನಮ್ಮ ಮನೆಗೆ ಸಮನ್ಸ್ ನೀಡಲು ಬಂದಿದ್ದ ಶಿವರಾಜ್, ಮಗಳನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆ ಪ್ರಕರಣ ಮುಗಿದು ಹೋಗಿದ್ದರೂ ನಾನಾ ಕಾರಣ ಹೇಳಿಕೊಂಡು ಮನೆಗೆ ಬಂದು ಹೋಗುತ್ತಿದ್ದ. ಕ್ರಮೇಣ ಮದುವೆ ಆಗುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದ. ಗರ್ಭಿಣಿಯಾದ ಕುರಿತು ಮಗಳು ನಮ್ಮ ಬಳಿ ತಿಳಿಸಿದ್ದು, ನಂತರ ಆ ಕುರಿತು ಶಿವರಾಜ್ನನ್ನು ಪ್ರಶ್ನಿಸಿದಾಗ, ಗರ್ಭಪಾತ ಮಾಡಿಸಿಕೊಳ್ಳಲು ಹಣ ನೀಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಶಿವರಾಜ್ ಅತ್ಯಾಚಾರ ಮಾಡಿರುವ ವಿಷಯ ತನ್ನ ಪ್ರಭಾವ ಬಳಸಿ ಮುಚ್ಚಿಡಲು ಪ್ರಯತ್ನಿಸಿದ್ದರೂ, ಅದು ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿತ್ತು. ಬಳಿಕ ಪ್ರಕರಣ ಹಾಸ್ಯಾಸ್ಪದವಾಗಿ ಹಲವು ರೂಪ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವರದಿ ಮಾಡದಂತೆ ಪತ್ರಕರ್ತರಿಗೆ ಪೊಲೀಸರು ದುಂಬಾಲು ಬೀಳುತ್ತಿರುವ ವಿಡಿಯೋ ಸಹ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ಅಮಾನತುಗೊಳಿಸಿ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.