Connect with us

LATEST NEWS

ಮುಲ್ಕಿ ಬಳಿ ಭೀಕರ ರಸ್ತೆ ಅಪಘಾತ – ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಓರ್ವ ಸಾವು

ಮುಲ್ಕಿ ಸೆಪ್ಟೆಂಬರ್ 27: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಹತ್ತಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಸಮೀಪದ ಕ್ಷೀರಸಾಗರದ ಬಳಿ ನಡೆದಿದ್ದು ಘಟನೆಯಲ್ಲಿ ಓರ್ವ ಸಾವನಪ್ಪಿದ್ದು, ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಮೃತ ಯುವಕನನ್ನು ಪಕ್ಷಿಕೆರೆ ಪಂಜ ನಿವಾಸಿ ರಘುನಾಥ್ ಪೂಜಾರಿ (40) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ಹಿಮಕರ ಮತ್ತು ಕಾರ್ತಿಕ್ (ಕೇಶವ ಪಂಜ) ಎಂದು ಗುರುತಿಸಲಾಗಿದೆ.


ಮೃತ ರಘುನಾಥ್ ತನ್ನ ಮಿತ್ರರಾದ ಹಿಮಕರ ಮಟ್ಟು, ಮತ್ತು ಕೆಮ್ರಾಲ್ ಗ್ರಾಪಂ ಸದಸ್ಯ ಕಾರ್ತಿಕ್(ಕೇಶವ ಪಂಜ) ರವರೊಂದಿಗೆ ಕಾರಿನಲ್ಲಿ ಮುಲ್ಕಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದಾಗ ಕ್ಷೀರಸಾಗರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ನಡುವೆ ಏಕಾಏಕಿ ಬೈಕ್ ಕ್ರಾಸ್ ಮಾಡುತ್ತಿದ್ದ ವೇಳೆಯಲ್ಲಿ ಅಪಘಾತ ತಪ್ಪಿಸಲು ಯತ್ನಿಸಿದಾಗ ಅಪಘತ ನಡೆದಿದೆ,


ಅಪಘಾತದ ರಭಸಕ್ಕೆ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ರಘುನಾಥ್ ಮತಪಟ್ಟಿದ್ದಾರೆ. ಉಳಿದಂತೆ ಅಪಘಾತದಲ್ಲಿ ಚಾಲಕ ಕಾರ್ತಿಕ್ ಹಾಗೂ ಹಿಮಕರ ಮಟ್ಟು ಸಹಿತ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.