DAKSHINA KANNADA
ಕಡಬ – ಪೊಲೀಸ್ ಜೀಪ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

ಪುತ್ತೂರು ಸೆಪ್ಟೆಂಬರ್ 4: ಪೋಲೀಸ್ ಜೀಪ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿಯಾದ ಘಟನೆ ಕಡಬದ ಕಳಾರ ಎಂಬಲ್ಲಿ ನಡೆದಿದೆ.
ಕಡಬದ ಎಸೈ ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಪೊಲೀಸ್ ಜೀಪ್ ಹಾಗೂ ಮತ್ತೊಂದು ಬೊಲೆರೋ ಜೀಪ್ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಡಬ ಎಸೈ ಸೇರಿದಂತೆ ಎರಡೂ ವಾಹನಗಳಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
