KARNATAKA
ಮಧ್ಯಪಾನ ವಿರೋಧಿಸಿದ ವಧುವಿಗೆ ಪೊಲೀಸರಿಂದ ನಗದು ಬಹುಮಾನ!
ಡೆಹ್ರಾಡೂನ್, ಫೆಬ್ರವರಿ 27: ಮಧ್ಯಪಾನ ವಿರೋಧಿಸಿದ ವಧುವಿಗೆ ಪೊಲೀಸರಿಂದ ನಗದು ಬಹುಮಾನ ನೀಡಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ.ಯುವತಿಯೊಬ್ಬಳು ತನ್ನ ವಿವಾಹದ ಕಾರ್ಯಕ್ರಮದಲ್ಲಿ ಮಧ್ಯಪಾನ ವಿರೋಧಿಸಿದ ನಿರ್ಧಾರಕ್ಕೆ ಮೆಚುಗೆ ವ್ಯಕ್ತಪಡಿಸಿ ಉತ್ತರಾಖಂಡ್ ಪೊಲೀಸರು ನಗದು ಬಹುಮಾನ ನೀಡಿದ್ದಾರೆ.
ತೇಹ್ರಿ ಜಿಲ್ಲೆಯ ದೇವಪ್ರಯಾಗದಲ್ಲಿ ಈ ಘಟನೆ ನಡೆದಿದ್ದು, ಮಧ್ಯಪಾನವನ್ನು ವಿರೋಧಿಸಿದ್ದ ವಧುಗಳಿಗೆ 10,001 ರೂಪಾಯಿಗಳ ನಗದು ಬಹುಮಾನ ನೀಡಿದ್ದಾರೆ. ಭುಲಿ ಕನ್ಯಾದಾನ್ ಯೋಜನೆಯಡಿ ವಧುವಿಗೆ ನಗದುಬಹುಮಾನವನ್ನು ನೀಡಲಾಗಿದೆ.
ಪೊಲೀಸ್ ಠಾಣೆಯ ಸಿಬ್ಬಂದಿಯಿಂದಲೇ ಹಣವನ್ನು ಸಂಗ್ರಹಿಸಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕಾಕ್ಟೈಲ್ ಪಾರ್ಟಿಗಳನ್ನು ತಡೆಯುವುದಕ್ಕೆ ದೇವಪ್ರಯಾಗ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ಜನತೆಯನ್ನು ಸಂಪರ್ಕಿಸಿ, ಈ ಕ್ರಮ ಕೈಗೊಳ್ಳಲಾಗಿದೆ.
ಮಧ್ಯಪಾನ ವಿರೋಧಿಸುವವರಿಗೆ ಉತ್ತೇಜನ ನೀಡುವುದರಿಂದ ವಿವಾಹ ಕಾರ್ಯಕ್ರಮಗಳಲ್ಲಿ ಮಧ್ಯಪಾನವನ್ನು ತಡೆಗಟ್ಟುವುದಕ್ಕೆ ಸಹಕಾರಿಯಾಗಲಿದೆ ಎಂಬುದನ್ನು ಸ್ಥಳೀಯರೂ ಒಪ್ಪಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಮಹಿಪಾಲ್ ರಾವತ್ ಹೇಳಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಮಧ್ಯಪಾನ ಹಲವು ಘರ್ಷಣೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಘರ್ಷಣೆಗಳನ್ನು ತಡೆಗಟ್ಟುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾವತ್ ಮಾಹಿತಿ ನೀಡಿದ್ದಾರೆ.