DAKSHINA KANNADA
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಅವಹೇಳನ – ವಿಟ್ಲ ಪೋಲೀಸ್ ಠಾಣೆಗೆ ದೂರು

ಪುತ್ತೂರು ನವೆಂಬರ್ 21: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಅವಹೇಳನ ಮಾಡಿದ ವಿಟ್ಲ ನಿವಾಸಿ ರಿಜ್ವಾನ್ ಖಾನ್ ಎಂಬಾತನ ವಿರುದ್ಧ ಹಿಂದೂ ಜಾಗರಣ ವೇದಿಕೆ ದೂರು ಸಲ್ಲಿಸಿದೆ.
ರಿಜ್ವಾನ್ ಖಾನ್ ಎಂಬಾತ ಹಿಂದೂ ದೇವಿ ಹಾಗೂ ದೇವತೆಗಳನ್ನು ಅವಹೇಳನ ಶಬ್ದಗಳಲ್ಲಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಟ್ಟಿದ್ದಾನೆ. ಅಲ್ಲದೆ ಕೋಮು ಸಾಮರಸ್ಯ ಕದಡಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ದೂರು ನೀಡಿದ್ದು, ಈ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
