LATEST NEWS
1.75 ಕೋಟಿ ಹಣ ದರೋಡೆ ಪ್ರಕರಣದ ಇಬ್ಬರು ಆರೋಪಿ ಸೆರೆ
1.75 ಕೋಟಿ ಹಣ ದರೋಡೆ ಪ್ರಕರಣದ ಇಬ್ಬರು ಆರೋಪಿ ಸೆರೆ
ಮಂಗಳೂರು ನವೆಂಬರ್ 5: ಆಭರಣ ಮಳಿಗೆ ಮಾಲಿಕರಿಗೆ ಸೇರಿದ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.75 ಕೋಟಿ ರೂಪಾಯಿ ನಗದನ್ನು ವಶ ಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಅಬ್ದುಲ್ ಮನ್ನಾನ್ ಹಾಗೂ ರಾಝಿ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ನಡೆಯುತ್ತಿದೆ.
ಅಕ್ಟೋಬರ್ 23ರಂದು ಮಧ್ಯಾಹ್ನ ಮಂಜುನಾಥ ಗಣಪತಿ ಪಾಲಂನಕರ ಎಂಬವರು ಮುಂಬೈನಿಂದ ಖಾಸಗಿ ಬಸ್ ನಲ್ಲಿ ಬಂದು ಲೇಡಿಹಿಲ್ ಬಸ್ ನಿಲ್ದಾಣ ಬಳಿ ಇಳಿದುಕೊಂಡಿದ್ದರು.
ರಸ್ತೆ ದಾಟುವ ವೇಳೆ ದುಷ್ಕರ್ಮಿಗಳಿಬ್ಬರು ತನ್ನನ್ನು ತಡೆದು ಕಾರಿನಲ್ಲಿ ಅಪಹರಿಸಿ, ನಗದು ಮತ್ತು 2 ಮೊಬೈಲ್ ಗಳನ್ನು ಕಸಿದು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 1.75 ಕೋಟಿ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. 1.40 ಕೋಟಿ ರೂ. ಮೌಲ್ಯದ 2000 ಮುಖಬೆಲೆಯ ನೋಟುಗಳು, 30 ಲಕ್ಷ ರೂ. ಮೌಲ್ಯದ 500 ರೂ. ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಹಣವು ಕಾರ್ ಸ್ಟ್ರೀಟ್ ನಲ್ಲಿರುವ ವೈಷ್ಣವಿ ಬೆಳ್ಳಿ ಆಭರಣಗಳ ಮಳಿಗೆ ಮಾಲಕ ಸಂತೋಷ್ ಎಂಬವರಿಗೆ ಸೇರಿದ್ದಾಗಿದೆ. ಹಣವನ್ನು ಮುಂಬೈನಿಂದ ಮಂಗಳೂರಿಗೆ ತರುವಾಗ ಆರು ಮಂದಿ ದುಷ್ಕರ್ಮಿಗಳು ಸೇರಿ ದರೋಡೆ ಮಾಡಿದ್ದರು.