Connect with us

    LATEST NEWS

    ಚೈತ್ರಾ ಕುಂದಾಪುರ ಗೆ ಷರತ್ತು ಬದ್ದ ಜಾಮೀನು

    ಚೈತ್ರಾ ಕುಂದಾಪುರ ಗೆ ಷರತ್ತು ಬದ್ದ ಜಾಮೀನು

    ಪುತ್ತೂರು ನವೆಂಬರ್ 5 : ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಹಿಂದೂ ಸಂಘಟನೆ ನಾಯಕಿ ಚೈತ್ರಾ ಕುಂದಾಪುರ ಅವರಿಗೆ ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.

    ಹಿಂದೂ ಜಾಗರಣ ವೇದಿಕೆ ಮುಖಂಡ ಗುರು ಪ್ರಸಾದ್ ಪಂಜ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಮೇಲೆ ಚೈತ್ರ ಕುಂದಾಪುರ ಸೇರಿದಂತೆ ಅವರ ತಂಡ 6 ಮಂದಿಯ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

    ಆಕ್ಟೋಬರ್ 24ರಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತಿದ್ದ ಚರ್ಚೆ ತೀವ್ರ ಸ್ವರೂಪ ಪಡೆದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಚೈತ್ರಾ ಮತ್ತು ಅವರ ತಂಡ ,ಗುರು ಪ್ರಸಾದ್ ಪಂಜ ಮತ್ತು ತಂಡದ ಮೇಲೆ ಹಲ್ಲೆ ನಡೆಸಿದ್ದರು. ನಂತರ ಎರಡು ತಂಡಗಳು ಸುಬ್ರಹಣ್ಯ ಸ್ಟೇಷನಲ್ಲಿ ದೂರು ದಾಖಲಿಸಿದ್ದವು .

    ಸುಳ್ಯ ನ್ಯಾಯಾಲಯ ಚೈತ್ರ ಕುಂದಾಪುರ ಹಾಗೂ ಅವರ ತಂಡದವರಿಗೆ ಅವರಿಗೆ ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ನವೆಂಬರ್ 3 ಕ್ಕೆ ಅನಾರೋಗ್ಯದ ನೆಪ ಒಡ್ಡಿ ನ್ಯಾಯಾಲಯಕ್ಕೆ ಹಾಜರಾಗದ ಚೈತ್ರಾ ಅವರ ವಿರುದ್ದ ಗರಂ ಆದ ಸುಳ್ಯ ಹೆಚ್ಚುವರಿ ನ್ಯಾಯಿಕ ನ್ಯಾಯಾಲಯದ ನ್ಯಾಯಾದೀಶರು ಇಂದು ಹಾಜರಿರುವಂತೆ ಸೂಚಿಸಿದರು. ಇಂದು ನ್ಯಾಯಾಲಯದ ವಿಚಾರಣೆಗೆ ಹಾಜರಾದ ಚೈತ್ರಾ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ಸುಳ್ಯ ನ್ಯಾಯಾಲಯ ವಿಧಿಸಿತ್ತು.

    ಇಂದು ಪುತ್ತೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಚೈತ್ರಾ ಜಮೀನು ಅರ್ಜಿಯ ವಿಚಾರಣೆ ನಡೆಯಿತ್ತು. ವಿಚಾರಣೆ ನಡೆದ ಬಳಿಕ ನ್ಯಾಯಾದೀಶರು ಶರತ್ತು ಬದ್ದ ಜಾಮೀನು ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply